ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

DNP ಮೊದಲ ಓದು: ಹೆಣ್ಣು–ಮಣ್ಣಿನ ಸಂಬಂಧದ ಚಿತ್ರಣ

Last Updated 16 ಜನವರಿ 2021, 19:31 IST
ಅಕ್ಷರ ಗಾತ್ರ

ಮಣ್ಣಿನ ಗೆಳತಿ(ಕೃಷಿ ಮಹಿಳೆಯರ ಅನುಭವ ಕಥನ)
ಲೇ:
ಭಾರತಿ ಹೆಗಡೆ
ಪ್ರ: ವಿಕಾಸ ಪ್ರಕಾಶನ
ಮೊ: 99000 95204

ಕನ್ನಡ ಕಥಾಲೋಕಕ್ಕೆ ‘ಸೀತಾಳೆ ದಂಡೆ’ಯ ಕಥೆಗಳನ್ನು ಪೋಣಿಸಿಕೊಟ್ಟ ಪತ್ರಕರ್ತೆ ಭಾರತಿ ಹೆಗಡೆ ಅವರು ದಾಖಲಿಸಿರುವ ಕೃಷಿ ಮಹಿಳೆಯರ ಅನುಭವ ಕಥನ ‘ಮಣ್ಣಿನ ಗೆಳತಿ’. ನಾಡಿನ ವಿವಿಧ ಭಾಗಗಳ 38 ‘ಮಣ್ಣಿನ ಗೆಳತಿಯರು’ ಇಲ್ಲಿ ಒಂದೆಡೆ ಸೇರಿದ್ದಾರೆ. ತಮ್ಮ ಹೊಲವನ್ನು ಕೃಷಿ ವಿಜ್ಞಾನದ ಪ್ರಯೋಗಾಲಯವನ್ನಾಗಿ ಪರಿವರ್ತಿಸಿದ ಒಬ್ಬೊಬ್ಬ ಸಾಧಕಿಯ ಯಶೋಗಾಥೆಯೂ ಬೆರಗು ಮೂಡಿಸುತ್ತದೆ. ಮಣ್ಣಲ್ಲಿ ನಾವೂ ಕೈಯಾಡಿಸಲು ಹೋಗುವಂತೆ ಪ್ರೇರೇಪಿಸುತ್ತದೆ. ಸಂದರ್ಶನ ರೂಪದ ಇಲ್ಲಿನ ಲೇಖನಗಳ ನಾಯಕಿಯರೆಲ್ಲ ಸಹಜ, ಸುಸ್ಥಿರ, ಸಾವಯವ ಕೃಷಿಯಲ್ಲಿ ಆಸಕ್ತರು. ಕೃಷಿಯ ಹಲವು ಸಮಸ್ಯೆಗಳಿಗೆ ವಿಶ್ವವಿದ್ಯಾಲಯಗಳ ತಜ್ಞರಿಗೂ ಹೊಳೆಯದ ಹಲವು ಆಸಕ್ತಿಕರ ಉಪಾಯಗಳು ಇಲ್ಲಿ ಮೇಳೈಸಿವೆ.

ಕೃಷಿಕ ಮಹಿಳೆಯರ ಕಥೆ ಹೇಳುತ್ತಲೇ ಕೃಷಿ ಜೀವನದ ನಾನಾ ಮಗ್ಗುಲುಗಳನ್ನೂ ಪರಿಚಯಿಸಲಾಗಿದೆ. ಇಲ್ಲಿ ಶಾಲೆಯ ಮುಖವನ್ನೇ ನೋಡದವರಿದ್ದಾರೆ. ಪದವಿಯನ್ನು ಪೂರೈಸಿದವರೂ ಇದ್ದಾರೆ. ಎಲ್ಲರಲ್ಲೂ ಎದ್ದು ಕಾಣುವುದು ಮಾತ್ರ ಕೃಷಿ ಬದುಕಿನ ಸಮಾನ ಆಸಕ್ತಿ. ಮಣ್ಣಿನೊಂದಿಗೆ ಹೆಣ್ಣು ಕೈ ಕೈ ಹಿಡಿದು ಸಾಗುವ ಹಲವು ಚಿತ್ರಣಗಳು ಇಲ್ಲಿವೆ. ಆದರೆ, ಕೃತಿಯ ‘ಕರ್ನಾಟಕದ ಕೃಷಿ ಮಹಿಳೆಯರು’ ವಿಭಾಗದಲ್ಲಿ ಫುಕುವೊಕ ಬಂದು ಕುಳಿತಿದ್ದೇಕೆ ಎನ್ನುವ ಪ್ರಶ್ನೆ ಮಾತ್ರ ಕಾಡುತ್ತದೆ. ಅಂದಹಾಗೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಶಸ್ತಿಗೂ ಈ ಕೃತಿ ಭಾಜನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT