ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಇದು ಸ್ವವಿಮರ್ಶೆಯ ಆತ್ಮಕಥನ

Last Updated 23 ಮೇ 2020, 19:45 IST
ಅಕ್ಷರ ಗಾತ್ರ

ದಿನಗೂಲಿ ಕಾರ್ಮಿಕರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಇಮ್ತಿಯಾಜ್‌ ಮೂಲತಃ ಭಾರತ ಕಮ್ಯೂನಿಸ್ಟ್‌ ಪಕ್ಷದ ಕಾರ್ಯಕರ್ತರಾಗಿದ್ದವರು.ಕಾಂಗ್ರೆಸ್‌, ಬಿಎಸ್‌ಪಿ ರಾಜಕೀಯ ಪಕ್ಷಗಳನ್ನು ಸುತ್ತಾಡಿದರೂಕಮ್ಯೂನಿಸ್ಟ್‌ ನಿಷ್ಠೆ ಉಳಿಸಿಕೊಂಡವರು. ಪಿಂಜಾರ ಕುಟುಂಬದಲ್ಲಿ, ಬಡತನದಲ್ಲಿ ಹುಟ್ಟಿ ಬೆಳೆದವರು. ಹಿಂದೂಗಳಲ್ಲಿ ದಲಿತರು ಅನುಭವಿಸುವ ನೋವನ್ನು ಇಮ್ತಿಯಾಜ್‌ ಅನೇಕ ಬಾರಿ ಸ್ವಧರ್ಮಿಯರಿಂದಲೇ ಅನುಭವಿಸಿದ್ದಾರೆ. ತನ್ನ ಬದುಕಿನಲ್ಲಿ ಕಂಡುಂಡದ್ದನ್ನು ಆತ್ಮ ನಿವೇದನೆ ರೂಪದಲ್ಲಿ ಈ ಆತ್ಮಕಥೆಯಲ್ಲಿ ತೆರೆದಿಟ್ಟಿದ್ದಾರೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಅನುಭವಿಸಿದ ಚಡಪಡಿಕೆಯ ಹೃದಯವಿದ್ರಾವಕ ಘಟನೆಗಳನ್ನೂ ನವಿರು ಹಾಸ್ಯದೊಂದಿಗೆ ಇಲ್ಲಿ ಚಿತ್ರಿಸಿದ್ದಾರೆ.

‘ಇದುಆತ್ಮಕಥೆಯಾಗಿ ಮಾತ್ರ ಉಳಿದಿಲ್ಲ, ಇದು ಆ ವೈಯಕ್ತಿಕ ಬದುಕನ್ನು ದಾಟಿ ಆಚೆಗೆ ವಿಸ್ತಾರಗೊಂಡಿದೆ. ವೈಯಕ್ತಿಕದಿಂದ ಸಾರ್ವತ್ರಿಕ ಸ್ವರೂಪ ಪಡೆದಿದೆ’ ಎನ್ನುವ ಸನತ್‌ಕುಮಾರ್‌ ಬೆಳಗಲಿಯವರ ಮುನ್ನುಡಿಯ ಮಾತು ಸೂಕ್ತವಾಗಿಯೇ ಈ ಕೃತಿಗೆ ಒಪ್ಪುತ್ತದೆ.

ಈ ಕೃತಿಯಲ್ಲಿ 44 ಅಧ್ಯಾಯಗಳಿವೆ. ಎಂಬತ್ತರ ದಶಕದ ದಾವಣಗೆರೆಯ ಕಾರ್ಮಿಕ ಚಳವಳಿ, ಕಮ್ಯೂನಿಸ್ಟ್‌ ರಾಜಕೀಯ, ತೊಂಬತ್ತರ ದಶಕದ ಆರಂಭದಲ್ಲಿ ‘ರಾಮಮಂದಿರ –ರಾಮಜ್ಯೋತಿ’ ಹೆಸರಿನಲ್ಲಿ ನಡೆದ ಕೋಮುವಾದ, ಜಾತಿವಾದವನ್ನು ಕೃತಿಯಲ್ಲಿ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.ರಾಮಜ್ಯೋತಿ’ ಹೆಸರಿನಲ್ಲಿ ದಾವಣಗೆರೆಯಲ್ಲಿ ನಡೆದ ಕೋಮು ಗಲಭೆಯ ನಂತರ ತ‌ಮ್ಮ ಬದುಕಿನಲ್ಲಿ ಉಂಟಾದ ಬದಲಾವಣೆಯನ್ನೂ ಅತ್ಯಂತ ನೋವಿನ ಧ್ವನಿಯಲ್ಲೇ ದಾಖಲಿಸಿದ್ದಾರೆ. ಸ್ವವಿಮರ್ಶೆ ಮತ್ತು ವಿಮರ್ಶೆಯ ಚಕ್ರದ ಮೇಲೆ ಈ ಆತ್ಮಕಥನ ಸಾಗಿದೆ. ಓದುವಾಗ ಈ ಕಥನದಲ್ಲಿನಾವೂ ಭಾಗಿದಾರರು ಎಂದೆನಿಸದೆ ಇರದು.

***

ಹೆಜ್ಜೆ ಗುರುತುಗಳು

(ಆತ್ಮಕಥನ)

ಲೇ: ಇಮ್ತಿಯಾಜ್‌ ಹುಸೇನ್‌

ಪ್ರ: ಸಹನಾ ಪ್ರಕಾಶನ, ದಾವಣಗೆರೆ

ಮೊ: 98441 10454

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT