ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಗೆಲುವಿನ ಜಗತ್ತಿಗೆ ಸಣ್ಣ ಬೆಳಕಿಂಡಿ

Last Updated 6 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಗೆಲುವು
ಲೇ:
ಶೇಖರ್‌ ಗಣಗಲೂರು
ಪ್ರ: ನಿರುತ ಪಬ್ಲಿಕೇಷನ್ಸ್‌
ಮೊ: 8073067542

ಇಂದಿನ ಈ ಸ್ಪರ್ಧಾ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಗೆಲುವಿನ ಹಂಬಲ. ಆದರೆ, ಕವಲು ದಾರಿಯಲ್ಲಿ ನಿಂತು ಗೆಲುವಿನ ಮಾರ್ಗ ಯಾವುದು ಎಂದು ಬಹುತೇಕರು ತಲೆ ಕೆರೆದುಕೊಳ್ಳುವುದುಂಟು. ಅಂಥವರಿಗಾಗಿಯೇ ಗೆಲುವಿನ ಮಂತ್ರ ಹೇಳಿಕೊಡುವ ಉಪನ್ಯಾಸಗಳು, ಕಾರ್ಯಾಗಾರಗಳನ್ನು ಹಲವರು ನಡೆಸುವುದುಂಟು. ಯಶಸ್ಸಿನ ಗುಟ್ಟನ್ನು ಹೇಳುವ ಕೃತಿಗಳು ಸಹ ರಚನೆಯಾಗಿರುವುದನ್ನು ಮರೆಯುವಂತಿಲ್ಲ. ಶೇಖರ್‌ ಗಣಗಲೂರು ಸಹ ಇದೀಗ ಅಂತಹದ್ದೊಂದು ಪ್ರಯತ್ನ ಮಾಡಿದ್ದು, ‘ಗೆಲುವು’ ಎಂಬ ಕೃತಿಯನ್ನು ಹೊರತಂದಿದ್ದಾರೆ.

ಗೆಲುವು ಎಂದರೇನು, ನಾವೇಕೆ ಗೆಲ್ಲುವುದಿಲ್ಲ, ಸ್ವಯಂ ಮೌಲ್ಯಮಾಪನದ ವಿಧಾನಗಳೇನು, ಭವ್ಯ ಭವಿಷ್ಯದ ಶೂನ್ಯ ಟ್ರಾಫಿಕ್‌ಗೆ ಏನು ಮಾಡಬೇಕು, ನಮ್ಮ ಬೆಲೆ ನಮಗೆ ಗೊತ್ತೇ, ಇತರರಂತೆ ಗೆಲ್ಲಲು ನಾವೇಕೆ ಬೇಕು, ಪ್ಲಾನ್‌ ಬಿ ಹೇಗಿರಬೇಕು – ಇಂತಹ ಹತ್ತಾರು ಪ್ರಶ್ನೆಗಳನ್ನು ಎತ್ತುವ ಮೂಲಕ ಗೆಲುವಿನ ಜಗತ್ತಿನ ಬೆಳಕಿಂಡಿಯಲ್ಲಿ ಓದುಗರನ್ನು ಇಣುಕಿಸಲು ಯತ್ನಿಸಿದ್ದಾರೆ ಲೇಖಕರು. ಪ್ರತಿಭೆಯೇ ನಮ್ಮ ಅಯಸ್ಕಾಂತ ಎಂದು ಪ್ರತಿಪಾದಿಸುವ ಈ ಕೃತಿ, ವೈಫಲ್ಯಗಳ ಕಂದಕಗಳೂ ಇವೆ ಹುಷಾರ್‌ ಎಂದು ಎಚ್ಚರಿಸುತ್ತದೆ. ಗೆಲುವಿಗೆ ಹಂಬಲಿಸುವವರು ಕೆಲವು ಟಿಪ್ಸ್‌ಗಳನ್ನು ಈ ಕೃತಿಯಲ್ಲಿ ಖಂಡಿತ ಹುಡುಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT