ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ತೆರಿಗೆ ಜಗತ್ತಿಗೆ ಪದಕೋಶ

Last Updated 18 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ವಿವಿಧ ಜ್ಞಾನಶಾಖೆಗಳಿಗೆ ಸಂಬಂಧಿಸಿದ ಪದಕೋಶಗಳು ಕನ್ನಡದಲ್ಲಿ ಹೆಚ್ಚೇನೂ ಇಲ್ಲ. ಆದರೆ, ಬೇರೆ ಬೇರೆ ವಿಷಯಗಳನ್ನು ಕನ್ನಡದಲ್ಲಿ ಬರೆಯಬೇಕಾದ, ಕನ್ನಡದಲ್ಲಿ ಓದಿಕೊಳ್ಳಬಹುದಾದ ಸಂದರ್ಭಗಳು ಹೆಚ್ಚುತ್ತ ಸಾಗಿವೆ. ಇದು ಕನ್ನಡದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಹೌದು. ತೆರಿಗೆಗೆ ಸಂಬಂಧಿಸಿದ ವಿಷಯಗಳನ್ನು ಕನ್ನಡದಲ್ಲಿ ಬರೆಯುವಾಗ, ಓದುವಾಗ ನೆರವಾಗಲಿ ಎಂಬ ಉದ್ದೇಶದಿಂದ ಸುಬ್ರಾಯ ಎಂ. ಹೆಗಡೆ ಮತ್ತು ಶಿವಣ್ಣ ಡಿ. ಅವರು ಜೊತೆಯಾಗಿ ‘ಸಂಕ್ಷಿಪ್ತ ತೆರಿಗೆ ಪದಕೋಶ’ವನ್ನು ಹೊರತಂದಿದ್ದಾರೆ. ಇದರಲ್ಲಿ ತೆರಿಗೆ ಜಗತ್ತಿನಲ್ಲಿ ಬಳಸುವ ಇಂಗ್ಲಿಷ್ ಪದಗಳಿಗೆ ಕನ್ನಡದ ಪದಗಳನ್ನು, ವಿವರಣೆಗಳನ್ನು ನೀಡಲಾಗಿದೆ.

ಕೃತಿಕಾರರಾದ ಹೆಗಡೆ ಮತ್ತು ಶಿವಣ್ಣ ಅವರು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಈ ಹಿಂದೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದವರು. ಅಲ್ಲದೆ, ತೆರಿಗೆಗೆ ಸಂಬಂಧಿಸಿದ ಆದೇಶಗಳನ್ನು, ಕಾಯ್ದೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿದ ಅನುಭವ ಹೊಂದಿರುವವರು. ಈ ಅನುವಾದ ಕೆಲಸದ ಸಂದರ್ಭದಲ್ಲಿ ಇವರು, ಕನ್ನಡದಲ್ಲಿ ಒಂದು ತೆರಿಗೆ ಪದಕೋಶದ ಅಗತ್ಯ ಇದೆ ಎಂಬುದನ್ನು ಮನಗಂಡರು. ಕನ್ನಡದಲ್ಲಿ ತೆರಿಗೆ ಕುರಿತ ಬರವಣಿಗೆಗಳಲ್ಲಿ ಇನ್ನಷ್ಟು ಖಚಿತತೆ ಮತ್ತು ಏಕರೂಪತೆ ಬರಬೇಕು ಎಂಬ ಉದ್ದೇಶದಿಂದ ಈ ಪದಕೋಶವನ್ನು ಹೊರತಂದಿರುವುದಾಗಿ ಅವರು ಹೇಳಿದ್ದಾರೆ. ತೆರಿಗೆಗೆ ಸಂಬಂಧಿಸಿದ ಐದು ಸಾವಿರಕ್ಕೂ ಹೆಚ್ಚಿನ ಪದಗಳಿಗೆ ಇಲ್ಲಿ ಇಂಗ್ಲಿಷ್‌ ವರ್ಣಮಾಲೆಯಲ್ಲಿನ ಅಕ್ಷರಗಳ ಅನುಕ್ರಮದಲ್ಲಿ ಕನ್ನಡ ಅರ್ಥ, ವಿವರಣೆ ನೀಡಲಾಗಿದೆ. ನ್ಯಾಯಾಲಯದ ಕಲಾಪಗಳು, ಆದೇಶಗಳಲ್ಲಿ ಬಳಕೆಯಾಗುವ ಕೆಲವು ಪದಗಳು, ನುಡಿಗಟ್ಟುಗಳು ಕೂಡ ಈ ಕೃತಿಯಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT