ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಮಿದುಳಿನ ಆರೈಕೆಗೊಂದು ಕೈಪಿಡಿ

Last Updated 1 ಜನವರಿ 2022, 19:30 IST
ಅಕ್ಷರ ಗಾತ್ರ

ಮಿದುಳಿನ ಆಘಾತ ವಾಸ್ತವಾಂಶಗಳು

ಲೇ:
ಡಾ.ಎನ್‌.ಕೆ. ವೆಂಕಟರಮಣ

ಅನು: ವೆಂಕಟೇಶ ಪ್ರಸಾದ್‌ ಬಿ.ಎಸ್‌.

ಸಂ: ಡಾ.ಕೆ.ಆರ್‌. ಕಮಲೇಶ್‌

ಪ್ರ: ಸಪ್ನ, ಬೆಂಗಳೂರು

ಸಂ: 080–40114455

ಅಧ್ಯಯನವೊಂದರ ಪ್ರಕಾರ, ಪ್ರತೀ ಒಂದು ಲಕ್ಷ ಜನರಲ್ಲಿ ಸರಾಸರಿ 180 ಜನರು ಮಿದುಳಿನ ಆಘಾತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಾರ್ಷಿಕ 17.5 ಲಕ್ಷ ಜನ ಪಾರ್ಶ್ವವಾಯುವಿನಿಂದ ಬಾಧಿತರಾಗುತ್ತಿದ್ದಾರೆ. ಕ್ಯಾನ್ಸರ್‌ಗಿಂತಲೂ ಹೆಚ್ಚು ಕಾಡುತ್ತಿರುವ ಇಂಥ ಆರೋಗ್ಯ ಸಮಸ್ಯೆಯ ಸಾಮಾಜಿಕ ಪರಿಣಾಮ ಊಹಿಸಲಾಗದು. ಈ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಯ ಬಗ್ಗೆ ವಾಸ್ತವಾಂಶ ತೆರೆದಿಡುವ ಕೃತಿ ಡಾ.ಎನ್‌.ಕೆ.ವೆಂಕಟರಮಣ ಅವರ ‘ಮಿದುಳಿನ ಆಘಾತ–ವಾಸ್ತವಾಂಶಗಳು’.

ಆಂಗ್ಲ ಭಾಷೆಯ ಪದಗಳನ್ನು ಹೆಚ್ಚಾಗಿ ಬಳಸದೆವೈಜ್ಞಾನಿಕ ವಿಷಯಗಳನ್ನು ವಿವರಿಸುವುದು ಕಷ್ಟಸಾಧ್ಯ. ಆದರೆ ವೆಂಕಟರಮಣ ಅವರು ಇಂಗ್ಲಿಷ್‌ನಲ್ಲಿ ಬರೆದ ಈ ಕೃತಿಯನ್ನುಪತ್ರಕರ್ತ ವೆಂಕಟೇಶ ಪ್ರಸಾದ್‌ ಬಿ.ಎಸ್‌. ಅವರು ಸರಳ ರೂಪದಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮಿದುಳಿನ ಆಘಾತದ ಬಗೆಗಳು, ರಕ್ತಪೂರೈಕೆ ವ್ಯವಸ್ಥೆ, ಮಿದುಳಿನ ಕಾರ್ಯವೈಖರಿ, ಗೋಲ್ಡನ್‌ ಅವರ್‌, ಚಿಕಿತ್ಸಾ ಕ್ರಮಗಳ ಕುರಿತು ಛಾಯಾಚಿತ್ರಗಳ ಸಹಿತ ವಿವರಣೆ ಇಲ್ಲಿದೆ. ಸೂಕ್ತವಲ್ಲದ ಜೀವನಶೈಲಿಯೂ ಮಿದುಳಿನ ಆಘಾತದ ಸಂಭಾವ್ಯವನ್ನು ಹೆಚ್ಚಿಸುತ್ತದೆ ಎನ್ನುವ ಅಂಶದ ಬಗ್ಗೆ ಲೇಖಕರು ಗಮನ ಸೆಳೆಯುತ್ತಾರೆ. ಮಿದುಳಿನ ಆಘಾತದ ಕುರಿತು ಜನರಲ್ಲಿರುವ ಮೂಢನಂಬಿಕೆಗಳು ಮತ್ತು ತಪ್ಪುತಿಳುವಳಿಕೆಗಳು ಯಾವುವು ಮತ್ತು ವಾಸ್ತವಾಂಶಗಳೇನು ಎನ್ನುವುದರ ವಿವರವಾದ ಮಾಹಿತಿ ಇಲ್ಲಿದೆ. ಮಿದುಳಿನ ಕುರಿತ ಪಠ್ಯಪುಸ್ತಕವಿದ್ದಂತಿರುವ ಈ ಕೃತಿಯನ್ನು ಕೆ.ಆರ್‌.ಕಮಲೇಶ್ ಸಂಪಾದಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT