ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲುಗಿಸುವ ಕುಲುಮೆ

Last Updated 28 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಮನುಜರ ನಡುವಿನ ಅಂಧಕಾರ, ಅಸಹಾಯಕತೆ, ಹಣದ ದರ್ಪ, ಕಾಮಾದಿಗಳು ವಿಷದ ಬೀಜ ಬಿತ್ತುವಂತವು. ಕಾಲಘಟ್ಟ ಬದಲಾದರೂವಿವಿಧ ರೂಪದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆ, ಗುಲಾಮಗಿರಿ ಪದ್ಧತಿಗಳು ಮನುಕುಲದ ಕಪ್ಪು ಚುಕ್ಕೆಗಳಂತಿವೆ.

ಅಮೆರಿಕ ಎಂದಾಕ್ಷಣ ನಮ್ಮ ಮನಸಿನಲ್ಲಿ ಮೂಡುವುದು ಬಣ್ಣದ ಲೋಕ. ಆದರೆ, ಆ ಬಣ್ಣದ ಲೋಕದಲ್ಲಿಯೂ ಅಂಧಕಾರವಿತ್ತೆಂದರೆ ಆಶ್ಚರ್ಯವೇನಲ್ಲ. ಮನುಷ್ಯ ಇರುವಲ್ಲಿ ಅನಾಚಾರಗಳಿಗೇನು ಕಡಿಮೆಇಲ್ಲ. ಅನಿಷ್ಟ ಪದ್ಧತಿಯ ವಿರುದ್ಧ ಹೋರಾಡಿದವರು ಅಮೆರಿಕದ ಗುಲಾಮ ನಾಯಕರೆಂದೇ ಕರೆಯುವಫ್ರೆಡರಿಕ್ ಡಗ್ಲಾಸ್. ಇವರು ಗುಲಾಮರಾಗಿ ಅನುಭವಿಸಿದ ಯಾತನೆಗಳನ್ನು ತಮ್ಮಆತ್ಮಕಥೆ ‘ಕಪ್ಪು ಕುಲುಮೆ’ಯಲ್ಲಿಮನಕಲಕುವಂತೆ ಬಣ್ಣಿಸಿದ್ದಾರೆ. ಒಂದೊಂದು ಅಧ್ಯಾಯದಲ್ಲಿಯೂ ಹೃದಯ ಹಿಂಡುವಂತಹ ಅನುಭವಗಳನ್ನು ದಾಖಲಿಸಿದ್ದಾರೆ. ಡಗ್ಲಾಸ್ ಯಾತನೆಗಳನ್ನು ತಾವೇ ಅನುಭವಿಸಿದಂತೆ ಭಾಸವಾಗುತ್ತದೆ ಓದುಗರಿಗೂ.

ಒಬ್ಬ ಕರಿಯ ಹೆಣ್ಣುಮಗಳ ಮೇಲಾದ ಕ್ರೌರ್ಯ ಹೇಳುತ್ತಾ, ಕಪ್ಪು ವರ್ಣೀಯರಅಸಹಾಯಕತೆ ಮತ್ತು ಹೀನಾಯ ಬದುಕಿನ ಸಂಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಯಜಮಾನನ ಸಿಟ್ಟಿಗೆ, ಆಕ್ರೋಶಕ್ಕೆ, ದೌರ್ಜನ್ಯಕ್ಕೆ ಗುರಿಯಾದ ಅಬಲೆಯ ದೇಹ ಹೆಪ್ಪುಗಟ್ಟಿ ಹಿಪ್ಪೆಯಾದ ಚಿತ್ರಣ ಎಂತವರಿಗೂ ಅರಗಿಸಿಕೊಳ್ಳಲಾಗದು. ‘ಲೇಖನಿಯೆಂಬುದು ಬಹುಶಃ ಆ ಗಾಯಗಳಿಂದ ಜನ್ಮತಾಳಿರಬಹುದು’ ಎಂದು ಲೇಖಕ ಒಂದು ಅಧ್ಯಾಯದಲ್ಲಿ ಹೇಳುತ್ತಾರೆ. ತಾಯಿ ಇದ್ದರೂ ಪ್ರೀತಿ ಇಲ್ಲದೆ, ತಂದೆ ಇದ್ದರೂ ಆಸರೆ ಇಲ್ಲದೆ, ಕೆಲವೊಮ್ಮೆ ಒಡೆಯನೇ ತಂದೆ ಎಂದು ಗೊತ್ತಿದ್ದರೂ ಅನಾಥ ಸ್ಥಿತಿಯಲ್ಲಿ ಬದುಕುವುದು ಎಂತಹ ವ್ಯಥೆ ಎನ್ನುವುದನ್ನು ಓದುವಾಗ ಕರುಳು ಕಿವುಚಿದಂತಾಗುತ್ತದೆ. ಡಗ್ಲಾಸ್‌ ಆತ್ಮಚರಿತೆಯನ್ನು ವಿಕಾಸ್ ಆರ್. ಮೌರ್ಯ ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ.

ಕಪ್ಪು ಕುಲುಮೆ
ಇಂಗ್ಲಿಷ್: ಫ್ರೆಡರಿಕ್ ಡಗ್ಲಾಸ್
ಕನ್ನಡಕ್ಕೆ: ವಿಕಾಸ್ ಆರ್. ಮೌರ್ಯ
ಪ್ರ: ಅಹರ್ನಿಶಿ ಪ್ರಕಾಶನ
ಮೊ: 94491 74662

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT