ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಮಲೆನಾಡಿನ ಗತ ಜೀವನದ ಬಿಂಬ

Last Updated 27 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಮೈಸೂರು ಪೇಪರ್‌ ಮಿಲ್ಸ್‌ (ಎಂಪಿಎಂ) ವ್ಯಾಪ್ತಿಯ ರೇಂಜರ್‌ನ ಬುಲೆಟ್‌ ಸದ್ದು ನಿಧಾನಗತಿಯಲ್ಲಿ ವ್ಯಾಪಿಸಿ ತೀರ್ಥಹಳ್ಳಿ ಸುತ್ತಮುತ್ತಲಿನ ಹಸಿರು ಪರಿಸರದ ಮೌನವನ್ನು ಆಪೋಷನ ತೆಗೆದುಕೊಳ್ಳುತ್ತಿರುವ ರೂಪಕವನ್ನು ಕಾದಂಬರಿಯ ಮೊದಲ ದೃಶ್ಯದಲ್ಲೇ ಕಟ್ಟಿಕೊಟ್ಟಿದ್ದಾರೆ ಲೇಖಕರು. ಹಾಗಾಗಿಯೇ ಓದುವಿಕೆಯ ವೇಗವೂ ಸರಾಗವಾಗಿ ಏರುತ್ತದೆ. ಪುಟ್ಟ ಕೃಷಿಭೂಮಿ ರೂಪಿಸಲು ಅಡೆತಡೆಯಾಗುವ ಹತ್ತೆಂಟು ಕಾನೂನುಗಳು ಕೈಗಾರಿಕೆ, ಪೇಪರ್‌ ಮಿಲ್ಲು, ಅಕೇಶಿಯಾ ನಾಟಿ ಇತ್ಯಾದಿ ‘ಅಧಿಕೃತ’ ಕಾರ್ಯಗಳ ವಿಚಾರದಲ್ಲಿ ಜಾಣಮೌನ ವಹಿಸುತ್ತವೆ. ಅರಣ್ಯ ನಾಶವನ್ನು ತಾವೇ ಮುಂದೆ ನಿಂತು ಮಾಡಿಸುತ್ತವೆ ಎಂಬುದನ್ನು ವಿಷಾದದಿಂದಲೇ ಇಲ್ಲಿನ ಪಾತ್ರಗಳು ಚರ್ಚಿಸುತ್ತವೆ.

ಕೃತಿಯಲ್ಲಿ ಮಲೆನಾಡಿನ ಹಸಿರು, ತರಕಾರಿಗಳು, ಕೃಷಿ ಪರಿಕರಗಳು, ಜಾನುವಾರುಗಳು ಎಲ್ಲವೂ ಮಾತನಾಡಿವೆ. ಹಲವೆಡೆ ಸ್ವಗತದ ರೂಪದಲ್ಲಿ, ಸುಮ್ಮನೆ ಇರುವಿಕೆಯ ರೂಪದಲ್ಲಿ ಧ್ವನಿ ಎತ್ತಿವೆ. ಶಿವಕುಮಾರ, ತನಿಯ ಪಾತ್ರಗಳು ಬಹುಶಃ ಲೇಖಕರು ತಾವು ಹತ್ತಿರದಲ್ಲಿ ಕಂಡು, ಅನುಭವಿಸಿದಂತಿವೆ. ಹಲವು ಸಂಕಷ್ಟಗಳಿಂದ ಮೇಲೆದ್ದು ಬಂದು ಶಿವಾನಂದರು ಈ ಕಾದಂಬರಿಯ ಮೂಲಕ ಮತ್ತೆ ಪುಟಿದೆದ್ದಿದ್ದಾರೆ. ಅದೇ ಕಸುವು ತುಂಬಿಕೊಂಡಿದ್ದಾರೆ.

ಪರಿಸರಾಸಕ್ತರು, ಮಲೆನಾಡಿನ ಜನಜೀವನದ ಹಳೆಯ ಕ್ಯಾನ್ವಾಸ್‌ ನೆನಪಿಸಲು ಬಯಸುವವರು ಓದಬಹುದಾದ ಕೃತಿ.

ಕೃತಿ: ಗರ್ಕು

ಲೇ: ಶಿವಾನಂದ ಕರ್ಕಿ

ಪ್ರ: ಧ್ವನಿ ಪ್ರಕಾಶನ ತೀರ್ಥಹಳ್ಳಿ

ಸಂ: 9945306617

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT