ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್‌ ಆರ್ವೆಲ್‌ ಆಯ್ದ ವೈಚಾರಿಕ ಪ್ರಬಂಧಗಳು

Last Updated 11 ಮೇ 2019, 20:00 IST
ಅಕ್ಷರ ಗಾತ್ರ

ಸಂಪಾದನೆ: ಕೆ.ಸತ್ಯನಾರಾಯಣ

ಪ್ರ: ಪರಸ್ಪರ ಪ್ರಕಾಶನ, ಚಿಕ್ಕನಹಳ್ಳಿ, ಬೆಂಗಳೂರು

ಮೊ: 9880910113

ಜಾರ್ಜ್‌ ಆರ್ವೆಲ್‌ ಅವರ ಮೂಲ ಹೆಸರು ಎರಿಕ್‌ ಬ್ಲೇರ್‌. ಇವರು ಹುಟ್ಟಿದ್ದು 1903ರಲ್ಲಿ ಮೋತಿಹಾರ್‌ನಲ್ಲಿ. ಇವರ ತಂದೆ ಭಾರತ ಸರ್ಕಾರದಲ್ಲಿ ಕಿರಿಯ ಶ್ರೇಣಿಯ ಅಧಿಕಾರಿಯಾಗಿದ್ದರು. ಆರ್ವೆಲ್‌ ಶಿಕ್ಷಣ ಪಡೆದಿದ್ದು ಇಂಗ್ಲೆಂಡ್‌ನಲ್ಲೇ. 1922–27ರ ಅವಧಿಯಲ್ಲಿ ಆರ್ವೆಲ್‌ ಬರ್ಮಾದ ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದರು.

ಕಾರ್ಮಿಕ ವರ್ಗದ, ಬಡವರ ಜೀವನವನ್ನು ಹತ್ತಿರದಿಂದ ಕಾಣಲು, ಅನುಭವಿಸಲು ಇದ್ದ ಕೆಲಸ ಬಿಟ್ಟು, ಗಣಿ, ಹೋಟೆಲ್‌, ಆಸ್ಪತ್ರೆ, ಸೇನೆ, ಖಾಸಗಿ ಶಾಲೆ, ಪುಸ್ತಕದ ಅಂಗಡಿಗಳಲ್ಲಿ ಕೆಲಸ ಮಾಡಿ ಬದುಕು ಸಾಗಿಸುತ್ತಾ, ಬದುಕಿನ ಬಗ್ಗೆ ವಿಶಿಷ್ಟ ದೃಷ್ಟಿಕೋನ ರೂಪಿಸಿಕೊಂಡರು. ಬಿಬಿಸಿ, ಟ್ರಿಬ್ಯೂನ್‌ ಮಾಧ್ಯಮ ಸಂಸ್ಥೆಗಳಲ್ಲೂ ಕೆಲಸ ಮಾಡಿ, ನಿರಂತರ ಅಂಕಣ ಬರೆಯುವುದರ ಜತೆಗೆ ಕಾದಂಬರಿಗಳ ರಚನೆಯಲ್ಲೂ ತೊಡಗಿದ್ದರು.

ಆರ್ವೆಲ್‌ ಅವರ ಆಯ್ದ ಕೆಲವು ವೈಚಾರಿಕ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿ ಕೃತಿ ಮೂಲಕ ಕೊಡುವ ಕೆಲಸವನ್ನು ಪರಸ್ಪರ ಪ್ರಕಾಶನ ಬಳಗವು, ‘ಚಿಂತಕರ ಮಾಲೆ–2’ ಮುಖೇನ ಮಾಡಿದೆ. ಈ ಸಂಕಲನದ ಓದು ಆರ್ವೆಲ್‌ ಕುರಿತು ವಿಸ್ತಾರ ಓದಿಗೆ ಪ್ರೇರಣೆ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT