ಭಾನುವಾರ, ಮಾರ್ಚ್ 29, 2020
19 °C

ಸಿದ್ಲಿಂಗಮ್ಮ ಹೇಳಿದ ಜನಪದ ಕಥೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈ ಕಥಾಸಂಕಲನ ಸ್ತ್ರೀಸಮುದಾಯದಿಂದ ಸೃಷ್ಟಿಗೊಂಡ ವಿಶಿಷ್ಟ ಕೃತಿ. ಸಿದ್ಲಿಂಗಮ್ಮ ಹೇಳಿರುವ ಮೂವತ್ತು ಜನಪದ ಕಥೆಗಳು ಈ ಸಂಕಲನದಲ್ಲಿದೆ. ಹಾಸ್ಯ, ವಿಡಂಬನೆ, ಗಂಭೀರ, ಮುಗ್ಧತೆ, ಚಾತುರ್ಯ, ತಂತ್ರ–ಪ್ರತಿತಂತ್ರ, ಸವಾಲು – ಇಷ್ಟೆಲ್ಲ ಭಾವಗಳಲ್ಲಿ ಇಲ್ಲಿಯ ಕಥೆಗಳು ಮೈದಾಳಿವೆ. ಈ ಕಥೆಗಳು ಒಗಟಿನ ಮಾದರಿಯಲ್ಲೂ ಇವೆ, ಗಾದೆರೂಪದ ಸ್ವರೂಪದಲ್ಲೂ ಇವೆ.

ಗ್ರಾಮೀಣ ಪರಿಸರದ ಮಹಿಳೆಯರು ತಮ್ಮ ನಿಟ್ಟುಸಿರನ್ನೂ ಕನಸುಗಳನ್ನೂ ಪರೋಕ್ಷವಾಗಿ ಕಥೆಯ ಯಾವುದೋ ಒಂದು ಪಾತ್ರದ ಮೂಲಕ ಅಭಿವ್ಯಕ್ತಿಸಿ ಕಥೆ ಕಟ್ಟುವುದುಂಟು. ಕುಡುಕ ಗಂಡ, ಕಾಮುಕ ಗಂಡಸು, ಧನಪಿಶಾಚಿ ಅತ್ತೆ–ಮಾವ, ಮೈದುನ–ನಾದಿನಿಯರ ಹಿಂಸೆ, ಭಾವಂದಿರ ಕ್ರೌರ್ಯ – ಇಂಥ ಎಷ್ಟೋ ಸಂದರ್ಭಗಳು ಕಥೆಯಲ್ಲಿ ಮೂಡಿಕೊಳ್ಳುತ್ತವೆ. ಪುರುಷಸಂಸ್ಕೃತಿಯ ಕೋಟೆಯೊಳಗಡೆ ಇದ್ದುಕೊಂಡೇ ಮಹಿಳೆ ತನ್ನದೇ ಆದ ಒಂದು ಒಳಜಗತ್ತನ್ನು ಸೃಷ್ಟಿಸಿಕೊಳ್ಳುವುದನ್ನು ಈ ಕಥೆಗಳು ಎತ್ತಿಹಿಡಿಯುತ್ತವೆ. 

ಈ ಕೃತಿಯಲ್ಲಿ ಕಥೆಗಳ ಜೊತೆಗೆ ಜೀನಹಳ್ಳಿ ಸಿದ್ಧಲಿಂಗಮ್ಮ ಅವರನ್ನು ಕುರಿತಾದ ಬರಹವೂ ಅನುಬಂಧದಲ್ಲಿದೆ. ಜತೆಗೆ ಅರ್ಥಕೋಶವನ್ನೂ ನೀಡಿರುವುದು ಉಪಯುಕ್ತವಾಗಿದೆ.

ಸಿದ್ಲಿಂಗಮ್ಮ ಹೇಳಿದ ಜನಪದ ಕಥೆಗಳು

ಸಂಪಾದಕರು: ಜೀನಹಳ್ಳಿ ಸಿದ್ಧಲಿಂಗಪ್ಪ

ರೇಣುಕಾ ಸಿದ್ಧಲಿಂಗಪ್ಪ

ಪ್ರಕಾಶಕರು: ಶ್ರುತಿ ಪ್ರಕಾಶನ

#90, ಬೆಳಕು, ವಿವೇಕಾನಂದ ಬ್ಲಾಕ್‌,

ಶಿಕ್ಷಕರ ಬಡಾವಣೆ, ಮೈಸೂರು – 570029

ದೂರವಾಣಿ: 9886026085

ಪುಟಗಳು: 180

ಬೆಲೆ: ₹160/–

ಪ್ರಕಟನೆಯ ವರ್ಷ: 2019

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು