ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಅಗಸ್ಯಾಗ ನಿಂತು ಕಂಡ ಬಿಂಬಗಳು

Last Updated 4 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಬಾಲ್ಯ, ವೃತ್ತಿ, ಬದುಕಿನ ಅನುಭವಗಳನ್ನು ಪುಟ್ಟ ಪುಟ್ಟ ಲೇಖನಗಳಾಗಿ ಬರೆದ ಬರಹಗಳ ಗುಚ್ಛವಿದು. ಲೇಖಕರ ಜೀವನಾನುಭವ, ಹಳ್ಳಿ ಸೊಗಡಿನ ಬದುಕು, ಗ್ರಾಮ ರಾಜಕೀಯ, ಹಸಿವು, ಬಡತನ ಇತ್ಯಾದಿಗಳೆಲ್ಲವೂ ಈ ಕೃತಿಯಲ್ಲಿ ಚಿತ್ರಣಗೊಂಡಿವೆ. ವಿವಿಧ ಪತ್ರಿಕೆಗಳಲ್ಲಿ ಲೇಖನ, ನುಡಿಚಿತ್ರಗಳಾಗಿ ಬರೆದ ಬರಹಗಳನ್ನು ಸ್ಥಳೀಯ ಸೊಗಡಿನಲ್ಲೇ ಈ ಕೃತಿ ನಿರೂಪಿಸಿದೆ.

37 ಲೇಖನಗಳು ಈ ಕೃತಿಯಲ್ಲಿವೆ. ಪ್ರವಾಸಿ ತಾಣಗಳ ಪರಿಚಯ, ಕೃಷಿ ಪರಿಚಯ, ಹಾಸ್ಯ, ಫಜೀತಿಯ ಪ್ರಸಂಗಗಳು, ಕಿಡಿಗೇಡಿತನ ಈ ಕೃತಿಯ ವೈವಿಧ್ಯವನ್ನು ಹೆಚ್ಚಿಸಿವೆ. ಸೆಗಣಿ ಮಾರಿ ಬಹುಮಾನ ಕೊಟ್ಟದ್ದು, ಅಂದಿನ ಹಳ್ಳಿ ಹುಡುಗರ ಕ್ರಿಕೆಟ್‌ ಹುಚ್ಚು, ಹಣದ ವ್ಯವಹಾರದಲ್ಲಾಗುವ ಎಡವಟ್ಟುಗಳನ್ನು ನವಿರಾಗಿ ಲಘು ದಾಟಿಯಲ್ಲಿ ವಿವರಿಸಿದ್ದಾರೆ. ಬಹುಶಃ ಪದಮಿತಿ, ಪ್ರಕಟಣಾ ವೇದಿಕೆಗಳ ಚೌಕಟ್ಟು ಇಲ್ಲವಾಗಿದ್ದರೆ ಈ ಬರಹಗಳು ಇನ್ನಷ್ಟು ವಿಸ್ತರಣೆಗೊಳ್ಳುತ್ತಿದ್ದವೇನೋ.

ಪೊಲೀಸ್‌ ಬದುಕಿನ ಅನುಭವ, ಶಿಕ್ಷಕನ ದೃಷ್ಟಿಯಲ್ಲಿ ಕಂಡ ಗ್ರಾಮ ಬಿಂಬಗಳನ್ನೂ ‘ನಮ್ಮೂರ ಅಗಸ್ಯಾಗ’ದಲ್ಲಿ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT