ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಅಕ್ಷರ ರೂಪದಲ್ಲಿ ಕೋಗಿಲೆ ಮೌನ

Last Updated 12 ಮಾರ್ಚ್ 2022, 19:30 IST
ಅಕ್ಷರ ಗಾತ್ರ

‘ಬಿಳಿಲು ಬಿಟ್ಟ ಬದುಕು’, ‘ಒಡಲುರಿ’, ‘ಮನಸು ಮುಗಿಲು’...ಹೀಗೆ ಹಲವು ಕಥಾಸಂಕಲನಗಳನ್ನುಕೊಟ್ಟಿರುವಕಾ.ತ. ಚಿಕ್ಕಣ್ಣ ಅವರ ಹೊಸ ಕಥಾಸಂಕಲನ ‘ಮಾಗಿ ಕೋಗಿಲೆ ಮೌನ’. ಕೋವಿಡ್‌ ಲಾಕ್‌ಡೌನ್‌ ಅವಧಿಯೂ ಸೇರಿ ಕಳೆದ ಆರೇಳು ವರ್ಷಗಳ ಅವಧಿಯಲ್ಲಿ ಚಿಕ್ಕಣ್ಣ ಅವರು ಬರೆದ ಸಣ್ಣ ಕಥೆಗಳ ಕುಯಿಲು ಇಲ್ಲಿದೆ.

ನಾಡಿನ ಹಲವು ಪತ್ರಿಕೆಗಳಲ್ಲಿ ಈ ಕಥೆಗಳು ಪ್ರಕಟವಾಗಿವೆ. ಈ ಕಥಾಸಂಕಲನದಲ್ಲಿ ಒಟ್ಟು 10 ಕಥೆಗಳಿವೆ. ಆದರೆ, ‘ಮಾಗಿ ಕೋಗಿಲೆ ಮೌನ’ ಎಂಬ ಶೀರ್ಷಿಕೆಯ ಕಥೆ ಇಲ್ಲಿಲ್ಲ. ಆದರೆ ಇಲ್ಲಿ ಶೀರ್ಷಿಕೆಯನ್ನು ರೂಪಕದಂತೆ ಬಳಸಲಾಗಿದೆ. ಈ ಕಥೆಗಳಲ್ಲಿ ಚಿತ್ರಿತವಾಗಿರುವ ಲೋಕ, ಪಾತ್ರಗಳು ತಮ್ಮ ನಿವೃತ್ತಿ ನಂತರದ ಬದುಕಿನಲ್ಲಿ ಲೇಖಕರು ಅನುಭವಿಸಿರುವ ವಾತಾವರಣದಿಂದ ದಕ್ಕಿದ್ದಾಗಿ ತೋಚುತ್ತದೆ.

ಚೊಕ್ಕ ಬರವಣಿಗೆ, ಬಳಸಿರುವ ರೂಪಕ ಓದಿಗೆ ವೇಗ ವರ್ಧಕವಾಗಿ ದೃಶ್ಯರೂಪದಲ್ಲಿ ರೋಮಾಂಚನ ನೀಡುತ್ತವೆ. ‘ನಿವೃತ್ತಿ ಮರುದಿನದ ಮುಂಜಾನೆ’ ಕಥೆಯಲ್ಲಿ, ಕಿಟಕಿಯಿಂದ ಹೊರನೋಡಿದ ಸುಬ್ಬರಾಯಪ್ಪನವರಿಗೆ ಕಂಡ ದೃಶ್ಯದ ವಿವರಣೆ– ‘ಕಾದ ಹೆಂಟೆನೆಲವು ನೀರ್‍ಗುಳ್ಳೆಗಳನ್ನು ಹೊರಡಿಸುತ್ತ ಮಳೆನೀರನ್ನು ಗುಳುಗುಳನೆ ಇಂಗಿಸಿಕೊಳ್ಳುವಂತೆ ಹೊರಗಿನ ಮರ, ಗಿಡ, ಹೂವು, ಎಲೆ ತಂಗಾಳಿ ಸೊಬಗೆಲ್ಲವೂ ಬೆಲ್ಲ–ತುಪ್ಪದ ಪಾಯಸವಾಗಿ ಒಳಗಿಳಿಯತೊಡಗಿತು’ ಇದಕ್ಕೆ ಸಾಕ್ಷ್ಯ. ‘ಭಾನುವಾರದ ಒಂದು ಹಗಲು’ ಕಥೆಯಲ್ಲಿ ಕುಪ್ಪುಸ್ವಾಮಿಯ ‘ಹೆಣ–ಹಣ’ದ ತಳಮಳ ಕಟ್ಟಿಕೊಟ್ಟ ಬಗೆಯೂ ಉಲ್ಲೇಖಾರ್ಹ.

ಕೃತಿ: ಮಾಗಿ ಕೋಗಿಲೆ ಮೌನ

ಲೇ: ಕಾ ತ ಚಿಕ್ಕಣ್ಣ

ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ

ಸಂ: 8880087235

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT