ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಾಟು

Last Updated 27 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಕಪಾಟು

ಚಿತ್ರದುರ್ಗ ಇತಿಹಾಸದಲ್ಲಿ ಬಿಳಿಚೋಡುಜೋಯಿಸರು ಹಾಗೂ ಚಿನ್ನಮನೆಯವರು

‌ಲೇ: ಲಕ್ಷ್ಮಣ್‌ ತೆಲಗಾವಿ

ಪ್ರ: ರೇಣುಕಾ ಪ್ರಕಾಶನ, ಚಿತ್ರದುರ್ಗ

ಪು: 118

ಬೆ: 100

ಮೊ: 99012 49579

ಇದೊಂದು ಸಂಶೋಧನಾ ಕೃತಿಯಾಗಿದ್ದು, ಚಿತ್ರದುರ್ಗ ನಾಯಕ ಸಂಸ್ಥಾನದ ತಲಸ್ಪರ್ಶಿ ಅಧ್ಯಯನಕ್ಕೆ ಪೂರಕವಾಗಿದೆ. ಚಿತ್ರದುರ್ಗ ನಾಯಕ ಸಂಸ್ಥಾನದ ಮೂಲ ರಾಜಗುರುಗಳಾಗಿದ್ದ ಅಧ್ಯಾತ್ಮ ಸಂಪನ್ನ ಬಿಳಿಚೋಡು ವಿರೂಪಾಕ್ಷ ಜೋಯಿಸರು ಮತ್ತು ದುರ್ಗದ ಪ್ರಥಮ ಅಧಿಕೃತ ಇತಿಹಾಸಕಾರ ಚಿನ್ನದಮನೆ ರಾಮಪ್ಪ ಅವರ ಬಗ್ಗೆ ಅನೇಕ ಮಾಹಿತಿಗಳನ್ನುಕೃತಿ ತೆರೆದಿಟ್ಟಿದೆ. ಗತಸಂಗತಿಗಳ ಮಾಹಿತಿ ಒದಗಿಸುವ ಜತೆಗೆ, ಇತಿಹಾಸದ ಇನ್ನಿತರ ಮಗ್ಗುಲುಗಳ ಪರಿಶೋಧನೆಗೆ ಅನುವು ಮಾಡಿಕೊಡುವಂತಿದೆ.

\\\\

ನಮ್ಮ ಗಿರಡ್ಡಿ ಸರ್‌ (ಡಾ.ಗಿರಡ್ಡಿ ಗೋವಿಂದರಾಜರಿಗೆ ನುಡಿನಮನ)

ಸಂಪಾದಕರು: ಶ್ಯಾಮಸುಂದರ ಬಿದರಕುಂದಿ, ಲಕ್ಷ್ಮಿಕಾಂತ ಇಟ್ನಾಳ

ಪ್ರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಧಾರಾವಾಡ

ದೂರವಾಣಿ: 0836–2790030

ಪುಟ: 218

ಬೆಲೆ: 100

ಗಿರಡ್ಡಿ ಗೋವಿಂದರಾಜರ ಬಹುಮುಖ ವ್ಯಕ್ತಿತ್ವ ನೋಡಿದವರು, ಅವರೊಂದಿಗೆ ಒಡನಾಡಿದವರು ಬರೆದ ಲೇಖನಗಳ ಸಂಕಲನವಿದು. ಜಿ.ಎಸ್‌.ಆಮೂರ, ಚೆನ್ನವೀರ ಕಣವಿ, ಗುರುಲಿಂಗ ಕಾಪಸೆ, ವೀಣಾ ಶಾಂತೇಶ್ವರ, ಚಂದ್ರಶೇಖರ ಪಾಟೀಲ, ಸಿ.ಎನ್‌.ರಾಮಚಂದ್ರನ್‌, ಸಿದ್ಧಲಿಂಗ ಪಟ್ಟಣಶೆಟ್ಟಿ, ಎಚ್‌.ಎಸ್‌.ವೆಂಕಟೇಶಮೂರ್ತಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಸೇರಿದಂತೆ ಹಲವು ಲೇಖಕರು ಮತ್ತು ಕವಿಗಳು ಗಿರಡ್ಡಿಯವರ ಬಗ್ಗೆ ಬರೆದ 52 ಲೇಖನಗಳು ಈ ಕೃತಿಯಲ್ಲಿವೆ. ಇದೊಂದು ಸಂಗ್ರಹ ಯೋಗ್ಯ ಮತ್ತು ಗಿರಡ್ಡಿಯವರು ಬದುಕು–ಬರಹ–ಸಾಧನೆಯನ್ನು ಅರಿಯಲು ಒಂದು ದೀವಿಗೆಯಂತಿದೆ.

////

ಸಂಕಥಾ

(ಜನಪದ ಕಥೆಗಳ ಸಂಗ್ರಹ)

ಸಂಪಾದಕರು: ಡಾ.ಬಿ.ಎಸ್‌.ಪ್ರಣತಾರ್ತಿಹರನ್‌

ಪ್ರ: ಸಮುದಾಯ ಅಧ್ಯಯನ ಕೇಂದ್ರ, ಮೈಸೂರು

ಪು: 592

ಬೆ: 500

ಸಂಕೇತಿ ಸಮುದಾಯದ ಸಮಗ್ರ ಜಾನಪದ ಕಥೆಗಳ ಸಂಕಲನವಿದು.ಹಾಸನ ಜಿಲ್ಲೆಯ ಅರಕಲಗೂಡು ಹಾಗೂ ಹೊಳೆನರಸೀಪುರ ತಾಲ್ಲೂಕಿಗೆ ಸೇರಿದ ಸಂಕೇತಿ ಜನಾಂಗದ ಆರು ಮಂದಿ ವಕ್ತೃಗಳಿಂದ ಸಂಗ್ರಹಿಸಲ್ಪಟ್ಟ 52 ಕಥೆಗಳು ಇದರಲ್ಲಿವೆ. ಈ ಕಥೆಗಳುಎಲ್ಲರೂ ಓದಿಆಸ್ಪಾದಿಸುವಂತಿವೆ. ಓದುಗರ ಮನದಲ್ಲೂಬಹುಕಾಲ ಉಳಿಯುತ್ತವೆ. ಇದೊಂದು ಸಂಗ್ರಹ ಯೋಗ್ಯ ಕೃತಿ.

////

ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್

ಲೇ: ಎಚ್‌.ಎಸ್‌.ಬೇನಾಳ

ಪ್ರ: ಸಹನ ಪ್ರಕಾಶನ, ಕಲಬುರಗಿ

ಪು: 248

ಬೆ: 240

ಮೊ: 9901177823

ಇತಿಹಾಸದಲ್ಲಿ ಮರೆಮಾಚಿರುವ ಡಾ.ಅಂಬೇಡ್ಕರ್‌ ಅವರ ಸಾಧನೆಗಳನ್ನು ಲೇಖಕರು ಈ ಕೃತಿಯಲ್ಲಿ ಸರಳ ಮತ್ತು ಕುತೂಹಲಕರವಾಗಿ ಕಟ್ಟಿಕೊಟ್ಟಿದ್ದಾರೆ.

ಕ‌ೃತಿಯಲ್ಲಿ ಮೂರು ಭಾಗಗಳಿದ್ದು,ನಾಗವಂಶದ ಚರಿತ್ರೆ, ಮುಚ್ಚುತ್ತಿರುವ ದಲಿತರ ಪ್ರಗತಿಯ ಬಾಗಿಲುಗಳು, ಕರ್ನಾಟಕ ಚರಿತ್ರೆಯಲ್ಲಿ ಅಲಕ್ಷಿತ ದಲಿತ ವಂಶದ ರಾಜರುಗಳು, ಚಾಳುಕ್ಯ ಚಕ್ರವರ್ತಿಗಳು ಹೊಲೆಯರು, ಕದಂಬರು ಮಾದಿಗ ವಂಶಸ್ಥರು,ರಾಷ್ಟ್ರಕೂಟರೂ ಕೂಡ ದಲಿತರೆ, ಬೌದ್ಧ ಧರ್ಮದ ವಿರುದ್ಧ ಬ್ರಾಹ್ಮಣರ ಯುದ್ಧ ಹೀಗೆ ಹಲವು ಅಧ್ಯಾಯಗಳಿಂದ ಕೂಡಿರುವ ಕೃತಿಯು ಓದಿಸಿಕೊಂಡು ಹೋಗುತ್ತದೆ. ಸೇವೆದಾಸಿ, ದೇವದಾಸಿ, ಹರಿಜನ ಪದಗಳು ಬೆಳೆದು ಬಂದ ಹಿನ್ನೆಲೆ ಬಗ್ಗೆಯೂ ಈ ಕೃತಿಯಲ್ಲಿ ಬೆಳಕು ಚೆಲ್ಲಲಾಗಿದೆ. ಇದು ಸಮಾಜಶಾಸ್ತ್ರೀಯ ಅಧ್ಯಯನಕ್ಕೂ ಆಕರ ಒದಗಿಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT