ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಕರ್ನಾಟಕ ಭೂವಿಜ್ಞಾನ: ಭೂ ವಿಜ್ಞಾನದ ಹಲವು ಆಯಾಮ

Last Updated 9 ಜುಲೈ 2022, 20:30 IST
ಅಕ್ಷರ ಗಾತ್ರ

ನಾಡಿನ ಭೂಸ್ತರಗಳು ರಚನೆಯಾದ ಬಗೆ, ವಿವಿಧ ಪ್ರದೇಶಗಳಲ್ಲಿರುವ ಭೂಮಿ ಹಾಗೂ ಖನಿಜ ವೈವಿಧ್ಯ, ನಿಸರ್ಗ ಸಂಪತ್ತು, ಜನ ಜೀವನದ ಕುರಿತ ದಾಖಲೆಯನ್ನು ಎತ್ತಿಕೊಟ್ಟಿದೆ ಈ ಕೃತಿ.

ಹತ್ತು ವಿಭಾಗಗಳ ಪೈಕಿ ಮೊದಲ ಅಧ್ಯಾಯವು ಶಿಲಾ ಕಲ್ಪಗಳ ಬಗ್ಗೆ ವೈಜ್ಞಾನಿಕ ಬೆಳವಣಿಗೆ ಹಾಗೂ ದಾಖಲೆಗಳ ಆಧಾರದಲ್ಲಿ ವಿವರಿಸಲಾಗಿದೆ. ಮುಂದೆ ಭೌಗೋಳಿಕ ಲಕ್ಷಣಗಳು, ಮಳೆ ನೀರು ಮತ್ತು ಅಂತರ್ಜಲ, ಶಿಥಿಲವಾಗುತ್ತಿರುವ ಅರಣ್ಯ ಪ್ರದೇಶ ಬದಲಾಗುತ್ತಿರುವ ಹವಾಮಾನ, ಜೀವಸಂಕುಲದ ಮೇಲೆ ಬೀರಿರುವ ದುಷ್ಪರಿಣಾಮದ ಮೇಲೆ ಮಾರ್ಮಿಕವಾಗಿ ಚರ್ಚಿಸಲಾಗಿದೆ. ಇದೇ ಚರ್ಚೆ ಅಧ್ಯಾಯ 5 ಮತ್ತು 8ರಲ್ಲೂ ಮುಂದುವರಿದಿದೆ.

ನಿಸರ್ಗ ಸಂಪತ್ತಿಗೆ ತಾಗಿಕೊಂಡೇ ಬೆಳೆದ ಸಾಂಸ್ಕೃತಿಕ ಹಿರಿಮೆಗಳು, ಸ್ಮಾರಕಗಳು, ಉದ್ಯಮ ಕ್ಷೇತ್ರಗಳು, ಕೈಗಾರಿಕೆಗಳು, ಪ್ರಮುಖ ಸಂಸ್ಥೆಗಳ ಮೇಲೂ ಕೃತಿ ಬೆಳಕು ಚೆಲ್ಲಿದೆ. ಭೂಶಾಸ್ತ್ರದ ಅಧ್ಯಯನ ಮಾಡಿದ ಬ್ರಿಟಿಷ್‌ ಹಾಗೂ ಮೈಸೂರು ಸಂಸ್ಥಾನದ ಭೂ ವಿಜ್ಞಾನಿಗಳನ್ನು ವಿವರವಾಗಿ ಪರಿಚಯಿಸಲಾಗಿದೆ. ಮಾತ್ರವಲ್ಲ, ಇದೇ ವಿಷಯವನ್ನು ಸರಳ ಭಾಷೆಯಲ್ಲಿ ಕನ್ನಡಿಗರಿಗೆ ತಲುಪಿಸಿದ ಕನ್ನಡ ಲೇಖಕರ ಬಗೆಗೂ ವಿವರಗಳಿವೆ.

ಭೂಶಾಸ್ತ್ರದ ವೈಜ್ಞಾನಿಕ ವಿಷಯಗಳಷ್ಟೇ ಅಲ್ಲ, ಎಲ್ಲ ಆಯಾಮಗಳನ್ನೂ ಸಂಗ್ರಹಿಸಿ ನಿರೂಪಿಸಿದ ಕೃತಿ ಇದು. ಅಲ್ಲಲ್ಲಿ ಕಾಗುಣಿತ ದೋಷಗಳನ್ನು ತಿದ್ದುವ ಅಗತ್ಯವನ್ನು ಹೊರತುಪಡಿಸಿದರೆ ಹೂರಣದ ದೃಷ್ಟಿಯಿಂದ ಗಮನಾರ್ಹವಾದ ಕೃತಿ.

ಕೃತಿ: ಕರ್ನಾಟಕ ಭೂವಿಜ್ಞಾನ

ಲೇ: ಡಾ.ಎಂ.ವೆಂಕಟಸ್ವಾಮಿ

ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ

ಸಂ: 080–22372388

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT