ಮಾಯಿ ಕೆಂದಾಯಿ (ಸ್ಮೃತಿ ಲಹರಿ)

ಸೋಮವಾರ, ಮೇ 27, 2019
27 °C

ಮಾಯಿ ಕೆಂದಾಯಿ (ಸ್ಮೃತಿ ಲಹರಿ)

Published:
Updated:

ಮಾಯಿ ಕೆಂದಾಯಿ (ಸ್ಮೃತಿ ಲಹರಿ)

ಲೇ: ಜಯಶ್ರೀ ದೇಶಪಾಂಡೆ
ಪ್ರ:ಮಾಧ್ಯಮ ಅನೇಕ

ಮೊ: 99029 97431

ಮನದಲ್ಲುಳಿಯುವ ಲಹರಿಗಳು

‘ಮಾಯಿ ಕೆಂದಾಯಿ’ (ಸ್ಮೃತಿ ಲಹರಿ) ಹೆಸರಿನಷ್ಟೇ ಅನನ್ಯವಾದ ಆಪ್ತ ಬರಹಗಳ ಗುಚ್ಛ. ಪುಸ್ತಕದುದ್ದಕ್ಕೂ ಅಲ್ಲಲ್ಲಿ, ಮತ್ತೆಮತ್ತೆ ಎದುರಾಗುವ ಮಾಯಿಯ ಅಂತಃಕರಣ, ಕೆಂದಾಯಿಯ ಮಾತೃವಾತ್ಸಲ್ಯವನ್ನು ಲೇಖಕಿ ಕಟ್ಟಿಕೊಟ್ಟ ಬಗೆ ವಿಶಿಷ್ಟ. ಒಂದಕ್ಕೊಂದು ಬೆಸೆದುಕೊಂಡಂತಿರುವ ಈ ಬರಹಗಳನ್ನು ಬಿಡಿಬಿಡಿಯಾಗಿ ಓದಿದರೂ ಸೈ, ಒಟ್ಟಾಗಿ ಓದಿದರೂ ಸೈ.
ಓದಿನ ನಡುನಡುವೆ ನಾಡಿನ ಇತರ ಪ್ರದೇಶದ ಜನರಿಗೆ ಅರ್ಥೈಸಿಕೊಳ್ಳಲು ಕಠಿಣವೆನಿಸುವಂತಹ ಪದ ಭಂಡಾರವಿದ್ದರೂ ಭಾಷೆಯ ಲಾಲಿತ್ಯದಲ್ಲಿ ಕಠಿಣ ಪದಗಳ ಅರ್ಥ ತಾನೇ ತಾನಾಗಿ ಒದಗಿಬರುತ್ತದೆ.

ಜಯಶ್ರೀ ದೇಶಪಾಂಡೆ, ಉತ್ತರ ಕರ್ನಾಟಕದ ಗ್ರಾಮ್ಯ ಭಾಷೆ, ಸಂಸ್ಕೃತಿ, ಜನಜೀವನ, ಪರಿಸರ, ಕೂಡು ಕುಟುಂಬದ ಸೊಗಸುಗಾರಿಕೆಯನ್ನು ಈ ಪುಸ್ತಕದಲ್ಲಿ ನವಿರಾಗಿ ಬಿಚ್ಚಿಟ್ಟಿದ್ದಾರೆ. ಆದರೆ ಕೊನೆಯಲ್ಲಿ ಒಂದು ಬರಹ ಮೂರು ಸಾರಿ ಪುನರಾವರ್ತನೆಯಾಗಿದೆ. ಇದೊಂದು ದೋಷವಾಗಿ ಉಳಿದುಬಿಟ್ಟಿದೆ.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !