ಮದಾರಿ

ಶನಿವಾರ, ಮೇ 25, 2019
25 °C

ಮದಾರಿ

Published:
Updated:

ಕೃತಿ: ಮದಾರಿ

ಲೇಖಕ: ವಿ. ಹರೀಶ್ ಕುಮಾರ್ 

ಪುಟ ಸಂಖ್ಯೆ: 148

ಬೆಲೆ: ₹100

ಪ್ರಕಾಶನ: ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ

ಮೊಬೈಲ್: 94499 35103

ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆಮಾರಿಯಾಗಿರುವ ಮದಾರಿ ಸಮುದಾಯದ ಸಮಗ್ರ ಚಿತ್ರಣ ‘ಮದಾರಿ’ ಕೃತಿಯಲ್ಲಿದೆ. ಮುಸ್ಲಿಂ ಧರ್ಮದಲ್ಲಿ ತಳಮಟ್ಟದ ಸಮುದಾಯವಾಗಿರುವ ಮದಾರಿಗಳು ಇಂದಿಗೂ ಭಿಕ್ಷಾವೃತ್ತಿ ಮತ್ತು ಇಲ್ಲವೇ ಚಿಕ್ಕಚಿಕ್ಕ ಕುಲಕಸುಬುಗಳಲ್ಲಿ ಜೀವನ ಸಾಗಿಸುತ್ತಿರುವ ವಿವರಗಳೂ ಇಲ್ಲಿವೆ. ಸಮುದಾಯದ ಆರ್ಥಿಕ, ಸಾಮಾಜಿಕ ದುಃಸ್ಥಿತಿಯ ಬಗ್ಗೆಯೂ ಕೃತಿ ಬೆಳಕು ಚೆಲ್ಲುತ್ತದೆ.

ಕರಡಿ, ಕೋತಿ ಮತ್ತು ಹಾವಾಡಿಸುವ ನಿರ್ಲಕ್ಷಿತ ಸಮುದಾಯದ ವಿವರಗಳನ್ನು ಕ್ಷೇತ್ರಾಧ್ಯಯನದ ನೆಲೆಯಲ್ಲಿ ಹರೀಶ್‌ ಕುಮಾರ್ ಕಟ್ಟಿಕೊಟ್ಟಿದ್ದಾರೆ. ಮದಾರಿಗಳಿಗೂ ಮೊಹರಂಗೂ ಇರುವ ಅವಿನಾಭಾವ ಸಂಬಂಧ, ಕರಡಿ–ಮನುಷ್ಯ ಸಂಬಂಧದ ಕಥೆಗಳ ಜತೆಗೆ ನಾಗರಿಕತೆಯ ಸೋಗಲಾಡಿತನ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ‘ಮದಾರಿ’ಯಂಥ ಅಲೆಮಾರಿಗಳ ಬದುಕನ್ನು ಛಿದ್ರಗೊಳಿಸುತ್ತಿರುವ ವಿವರಗಳೂ ಇಲ್ಲಿವೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !