ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ರಾಜಿರಹಿತ ವ್ಯಕ್ತಿತ್ವದ ಬೆಳಕಿಂಡಿ 'ಸುಭಾಷ್‌ಚಂದ್ರ ಬೋಸ್‌" ಪುಸ್ತಕ

Last Updated 7 ಮೇ 2022, 20:15 IST
ಅಕ್ಷರ ಗಾತ್ರ

ರಾಜಿಯಾಗದ ವ್ಯಕ್ತಿತ್ವವೊಂದರ ಬದುಕನ್ನು ತೆರೆದಿಟ್ಟಿದೆ ಈ ಕೃತಿ. ಸುಭಾಷರು ಎಲ್ಲರನ್ನೂ ಒಂದಾಗಿಸಿ ಹೋರಾಟ ಕಟ್ಟಿದ ಕಥೆಯನ್ನು, ಅವರ ಮೇರು ಬದುಕನ್ನು ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ಹಲವು ಒಳನೋಟಗಳನ್ನೂ ಇಲ್ಲಿನ ಲೇಖನಗಳು ಒಳಗೊಂಡಿವೆ.

ಹೋರಾಟ ಎಂದರೆ ನೇರ ಮುಖಾಮುಖಿ ಅಲ್ಲ. ಇಲ್ಲಿ ನಾಯಕನೆನಿಸಿದವನು ಹಲವು ನಿಂದೆ, ಆರೋಪ, ಹೀಯಾಳಿಕೆಗಳನ್ನು ಅನುಭವಿಸಲೇಬೇಕಾಗುತ್ತದೆ. ಸುಭಾಷರ ಬದುಕೂ ಇದಕ್ಕೆ ಹೊರತಲ್ಲ. ಅಷ್ಟು ಹೋರಾಟಗಳನ್ನು ಕಟ್ಟಿದರೂ ಕಾಂಗ್ರೆಸ್‌ನಿಂದ ಹೊರಬರಬೇಕಾದ ಸಂದರ್ಭದಲ್ಲಿ ಅವರು ಅನುಭವಿಸಿದ ತುಮುಲಗಳನ್ನೂ ಇಲ್ಲಿನ ಬರಹ ತೆರೆದಿಟ್ಟಿದೆ.

ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭ, ಅಂದಿನ ಕಾಂಗ್ರೆಸ್‌ಗೆ ಸವಾಲೆಸೆಯುವ ರೀತಿಯಲ್ಲಿ ಸುಭಾಷರಿಗೆ ಬೆಂಬಲ ಸಿಕ್ಕಿದ ಘಟನೆಗಳನ್ನು ಕೃತಿಯಲ್ಲಿ ದಾಖಲಿಸಲಾಗಿದೆ.

ಸುಭಾಷ್‌ ಅವರ ಮಹಿಳಾ ಸಬಲೀಕರಣದ ಪ್ರಸಂಗಗಳನ್ನು ಉಲ್ಲೇಖಿಸಲಾಗಿದೆ. ರಾಣಿ ಝಾನ್ಸಿ ರೆಜಿಮೆಂಟ್‌ ಸ್ಥಾಪನೆಯ ಸಂದರ್ಭ ಮತ್ತು ನೇತಾಜಿಯ ಮಹಿಳಾಪರ ಮಾತುಗಳನ್ನು ಉಲ್ಲೇಖಿಸಲಾಗಿದೆ. ಕೃತಿಯ ಉದ್ದೇಶವೂ ಅದೇ ಆಗಿದೆ. ಪ್ರಸಕ್ತ ಸಂದರ್ಭದಲ್ಲಿ ಅವರ ವಿಚಾರಧಾರೆಗಳು ಹೆಚ್ಚು ಪ್ರಸ್ತುತ ಎಂದು ಕೃತಿ ಪ್ರತಿಪಾದಿಸುತ್ತದೆ. ಸುಭಾಷರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಭರದಲ್ಲಿ

ಗಾಂಧೀಜಿಯವರವ್ಯಕ್ತಿತ್ವವನ್ನು ಟೀಕಿಸುವ ಅಗತ್ಯವಿರಲಿಲ್ಲ ಎನ್ನುವ ಅನಿಸಿಕೆ ಈ ಪುಸ್ತಕ ಓದುವಾಗ ಮತ್ತೆ ಮತ್ತೆ ಕಾಡುತ್ತದೆ. ನೇತಾಜಿ ಅವರದು ಸ್ವತಃ ದೊಡ್ಡ ವ್ಯಕ್ತಿತ್ವ. ಗಾಂಧೀಜಿಯವರ ವ್ಯಕ್ತಿತ್ವವನ್ನು ಟೀಕಿಸಿ ಅವರನ್ನು ದೊಡ್ಡವರನ್ನಾಗಿ ಕಾಣಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯ ಹರಳುಗಟ್ಟಿ ನಿಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT