ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಪರಮೇಶ್ವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ

Last Updated 30 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ದಲಿತ ಸಮುದಾಯದಿಂದ ಬಂದು ಹಂತ ಹಂತವಾಗಿ ಮೇಲೇರಿದ ವಿಶಿಷ್ಟ ರಾಜಕಾರಣಿಯಾದ ಜಿ.ಪರಮೇಶ್ವರ ಅವರ ಅಭಿನಂದನಾ ಗ್ರಂಥವಿದು. ಈ ಹೊತ್ತಗೆಯ ಬಹುತೇಕ ಲೇಖನಗಳಲ್ಲಿ ಪರಮೇಶ್ವರ ಅವರನ್ನು ಪ್ರತಿಭಾವಂತ ಹಾಗೂ ವಿನಯವಂತ ರಾಜಕಾರಣಿಯನ್ನಾಗಿ ಗುರ್ತಿಸಲಾಗಿದೆ. ಜಾತಿ ಬೆಂಬಲವಿಲ್ಲದೆ, ಮಠಗಳ ಬೆಂಬಲವಿಲ್ಲದೆ ರಾಜಕೀಯದಲ್ಲಿ ಈ ವ್ಯಕ್ತಿ ಹೇಗೆ ಎತ್ತರಕ್ಕೆ ಬೆಳೆದರು ಎಂಬ ಒಳನೋಟಗಳು ಇಲ್ಲಿನ ಬರಹಗಳಲ್ಲಿ ಸಿಕ್ಕುತ್ತವೆ. ರಾಜಕೀಯ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಅವರು ಮೂಡಿಸಿದ ಹೆಜ್ಜೆ ಗುರುತುಗಳನ್ನು ದಾಖಲಿಸುವ ಕೆಲಸವನ್ನೂ ಈ ಕೃತಿ ಮಾಡಿದೆ.

ಯು.ಆರ್‌.ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ, ಹಿ.ಶಿ. ರಾಮಚಂದ್ರೇಗೌಡ, ಅರವಿಂದ ಮಾಲಗತ್ತಿ, ಎಸ್‌.ಜಿ. ಸಿದ್ದರಾಮಯ್ಯ ಅವರಂತಹ ಸಾಹಿತಿಗಳಲ್ಲದೆ, ಕೆ.ಆರ್‌.ರಮೇಶಕುಮಾರ್‌, ಬಿ.ಎಲ್‌. ಶಂಕರ್‌, ಬಿ.ಕೆ. ಚಂದ್ರಶೇಖರ್‌ ಅವರಂತಹ ಹಿರಿಯ ರಾಜಕಾರಣಿಗಳು ಬರೆದ ಬರಹಗಳು ಇಲ್ಲಿವೆ. ಕೃತಿಯಲ್ಲಿರುವ ಹಲವು ಕೋನಗಳು, ಮನಗೆದ್ದು ಮಾರು ಗೆದ್ದವರು, ಮಾಧ್ಯಮದವರು ಕಂಡಂತೆ ಮತ್ತು ಚಿತ್ರಸಂಪುಟ ಎಂಬ ನಾಲ್ಕು ಭಾಗಗಳಲ್ಲಿ ಮರಮೇಶ್ವರರ ವ್ಯಕ್ತಿತ್ವ ಹರಡಿಕೊಂಡಿದೆ.

ಕೃತಿ: ಸವ್ಯಸಾಚಿ
ಡಾ.ಜಿ.ಪರಮೇಶ್ವರ ಗೌರವ ಗ್ರಂಥ

ಸಂ: ಪ್ರೊ. ಮಾದೇವ್‌ ಭರಣಿ

ಪ್ರ: ಬಾಳೆಎಲೆ ಪ್ರಕಾಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT