ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನಲ್ಲಿ ಎದುರಾಗುವ ಸಂಘರ್ಷಗಳಿಗೆ ಕನ್ನಡಿ

Last Updated 12 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ವರ್ಜಿನ್‌ ಮೊಹಿತೊ

ಲೇ: ಸತೀಶ್‌ ಚಪ್ಪರಿಕೆ

ಪ್ರ: ಅಂಕಿತ ಪುಸ್ತಕ,

ದೂ: 080 2661 7100

***

ಪತ್ರಕರ್ತ ಸತೀಶ್‌ ಚಪ್ಪರಿಕೆ ಅವರು ಸುದೀರ್ಘ ಬಿಡುವಿನ ಬಳಿಕ ಕಥೆಗಾರರಾಗಿ ಮತ್ತೆ ಕನ್ನಡಿಗರ ಮುಂದೆ ಬಂದಿದ್ದಾರೆ. ಅವರ ಮೊದಲ ಕಥಾ ಸಂಕಲನ ಪ್ರಕಟವಾಗಿ ಹಲವು ವರ್ಷಗಳ ಬಳಿಕ ಅವರ ಎರಡನೇ ಕಥಾ ಸಂಕಲನ ‘ವರ್ಜಿನ್‌ ಮೊಹಿತೊ’ ಇದೀಗ ಓದುಗರ ಕೈಯಲ್ಲಿದೆ. ಸಂಕಲನದಲ್ಲಿ ಒಟ್ಟು ಏಳು ಕಥೆಗಳಿವೆ. ಅದರಲ್ಲಿ ಆರು ಕಥೆಗಳು ಆಷಾಢದ ಮಳೆ ಹನಿಗಳ ಮಧ್ಯೆ ಹುಟ್ಟಿದಂಥವು ಎಂದು ಲೇಖಕರು ಹೇಳಿಕೊಂಡಿದ್ದಾರೆ. ಆದರೆ, ಒಂದರ ನೆರಳು, ಮತ್ತೊಂದರ ಮೇಲೆ ಬಿದ್ದಿಲ್ಲ. ಅಷ್ಟರಮಟ್ಟಿಗೆ ಒಂದಕ್ಕಿಂತ ಇನ್ನೊಂದು ಅನನ್ಯ. ಸಮಕಾಲೀನ ಬದುಕಿನ ಸಂಘರ್ಷಗಳನ್ನು ವಿಶ್ಲೇಷಿಸುವ ಗುಣ ಈ ಕಥೆಗಳಲ್ಲಿ ಕಾಣುತ್ತದೆ.

ಪತ್ರಕರ್ತನ ತಳಮಳವನ್ನು ಕಟ್ಟಿಕೊಡುವ ‘ಬೊಂಬಾಯಿ ಪೆಟ್ಟಿಗೆ’ ಕಥೆಯಲ್ಲಿ ಚಪ್ಪರಿಕೆ ಅವರಲ್ಲಿ ‘ಪತ್ರಕರ್ತ’ ಹಿಂದೆ ಸರಿದು, ‘ಕಥೆಗಾರ’ ಮುಂದೆ ಬಂದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ತಣ್ಣನೆಯ ಧಾಟಿಯ ನಿರೂಪಣೆ ಮನಸ್ಸಿನಲ್ಲಿ ಉಳಿಯುತ್ತದೆ. ‘ವರ್ಜಿನ್‌ ಮೊಹಿತೊ’ ಹಾಗೂ ‘ಮೂರು ಮುಖಗಳು’, ‘ದಾಸ’ ಸಹ ನೆನಪಿನಲ್ಲಿ ಉಳಿಯುವಂತಹ ಕಥೆಗಳು. ಉಳಿದ ಕಥೆಗಳು ಸಲೀಸಾಗಿ ಓದಿಸಿಕೊಂಡು ಹೋಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT