ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೂಹ ಮಾಧ್ಯಮ ಸಂಶೋಧನೆ ಕೃತಿ: ಸಂಶೋಧನೆಯ ಸ್ಥೂಲ ನೋಟ

Last Updated 11 ಜೂನ್ 2022, 19:30 IST
ಅಕ್ಷರ ಗಾತ್ರ

ಮಾಧ್ಯಮ ಸಂಶೋಧನೆಗೆ ಸಂಬಂಧಿಸಿ ಪ್ರಸ್ತುತ ಕೃತಿಯಲ್ಲಿ ಸ್ಥೂಲ ನೋಟವನ್ನು ನೀಡಲು ಲೇಖಕರು ಪ್ರಯತ್ನಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳೇ ಈ ಕೃತಿಯ ಗುರಿ. ಆದರೆ, 24/7 ಪ್ರಸಾರ ಮಾಧ್ಯಮಗಳು ಸ್ಥಳೀಯಮಟ್ಟದಲ್ಲಿ (ಕನ್ನಡದ) ಪ್ರೇಕ್ಷಕನ ನಾಡಿಮಿಡಿತ ಅರಿಯಬೇಕಾದ ಮಹತ್ವವನ್ನು ಆರಂಭದಲ್ಲೇ ಹೇಳಿದ್ದಾರೆ. ಪ್ರೇಕ್ಷಕನಿಗೇನು ಬೇಕು, ಎಷ್ಟು ಬೇಕು ಎಂಬುದನ್ನು ಮಾಧ್ಯಮಗಳಲ್ಲಿ ವಿಷಯ ರೂಪಿಸುವವರು (ಕಂಟೆಂಟ್‌ ಕ್ರಿಯೇಟರ್ಸ್‌) ವೈಜ್ಞಾನಿಕವಾಗಿ ಅರಿತುಕೊಂಡರೆ ಮಾತ್ರ ಆಯಾ ಕಾರ್ಯಕ್ರಮದ ಉದ್ದೇಶ ಗುರಿ ಮುಟ್ಟುತ್ತದೆ ಎಂಬುದನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.

ಸಂಶೋಧನೆಗೆ ಸಂಬಂಧಿಸಿ ಇಲ್ಲಿ ಕೊಟ್ಟಿರುವ ಸೈದ್ಧಾಂತಿಕ ವಿವರಗಳು ಮತ್ತು ವಿಧಾನಗಳು ಎಲ್ಲ ವಿಷಯಗಳಿಗೂ ಸಂಬಂಧಿಸಿ ಸಾಮಾನ್ಯೀಕರಿಸಿದವೇ ಆಗಿವೆ. ಸಮೂಹ ಮಾಧ್ಯಮ ಸಂಶೋಧನೆ ಬೆಳವಣಿಗೆ ಕುರಿತ ವಿವರಣೆಯಲ್ಲಿ ಪ್ರತಿಯೊಬ್ಬ ಸಂಶೋಧಕ ತನ್ನ ಅಧ್ಯಯನದಲ್ಲಿ ಗಮನಿಸಲೇಬೇಕಾದ ಸೂಕ್ಷ್ಮ ವಿಷಯಗಳತ್ತ ವಿವರವಾಗಿ ಬೆಳಕು ಚೆಲ್ಲಲಾಗಿದೆ. ಜೊತೆಗೆ ಮುದ್ರಣ, ಪ್ರಸಾರ ಮಾಧ್ಯಮಗಳ ವಿವಿಧ ವಿಭಾಗಗಳ ಮೇಲೂ ನಡೆಸುವ ಸಂಶೋಧನೆಗಳ ಬಗ್ಗೆ ವಿವರಗಳಿವೆ. ದತ್ತಾಂಶಗಳ ವಿಶ್ಲೇಷಣೆ, ಗಣಿತ ಸೂತ್ರಗಳ ಬಳಕೆಯನ್ನು ಉದಾಹರಣೆಗಳ ಸಹಿತ ಕೊಟ್ಟಿದ್ದಾರೆ. ಸಮೂಹ ಮಾಧ್ಯಮ ಸಂಶೋಧನೆ ಸಂಬಂಧಿಸಿ ಇಂಗ್ಲಿಷ್‌ ಕೃತಿಗಳಲ್ಲಿ ಕ್ಲಿಷ್ಟವೆನಿಸಬಹುದಾದ ವಿಷಯಗಳನ್ನು ಸರಳ ಕನ್ನಡದಲ್ಲಿ ನಿರೂಪಿಸಿದ್ದಾರೆ.

ಮಾಧ್ಯಮ ವಿದ್ಯಾರ್ಥಿಗಳಿಗೆ ಇದು ಉಪಯುಕ್ತ ಕೃತಿ.

ಕೃತಿ: ಸಮೂಹ ಮಾಧ್ಯಮ ಸಂಶೋಧನೆ

ಲೇ: ಡಾ.ಸತೀಶ್‌ ಕುಮಾರ್‌ ಅಂಡಿಂಜೆ

ಪ್ರ: ಸ್ನೇಹಾ ಎಂಟರ್‌ಪ್ರೈಸಸ್‌ ಬೆಂಗಳೂರು

ಸಂಪರ್ಕ: 94488 70461

ಪುಟಗಳು: 340

ಬೆಲೆ: ₹ 250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT