ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಸುಕ್ರಜ್ಜಿ ಜೀವನಕಥನದ ತುಣುಕು ‘ಹಾಡಿನ ಕಣಜ ಸುಕ್ರಿ ಬೊಮ್ಮಗೌಡ‘ ಪುಸ್ತಕ

Last Updated 7 ಮೇ 2022, 20:15 IST
ಅಕ್ಷರ ಗಾತ್ರ

ಈ ಕೃತಿ ಹಾಡಿನ ಕಣಜ ಎಂದೇ ಖ್ಯಾತಿ ಪಡೆದಿರುವ, ಸುಕ್ರಜ್ಜಿ ಎಂದೇ ಎಲ್ಲರೂ ಗುರುತಿಸುವ ಸುಕ್ರಿ ಬೊಮ್ಮಗೌಡ ಅವರ ಜೀವನ ಚರಿತ್ರೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠವು‘ಒಕ್ಕಲಿಗ ಸಾಧಕರು’ ಎಂಬ ಶೀರ್ಷಿಕೆಯಡಿ ‘ವಿಕಸನ’ ಸಂಸ್ಥೆಯ ಮೂಲಕ ಆರಂಭಿಸಿದ ಗ್ರಂಥಮಾಲೆಯ ಭಾಗವಾಗಿ ‘ಹಾಡಿನ ಕಣಜ ಸುಕ್ರಿ ಬೊಮ್ಮಗೌಡ’ ಮೂಡಿಬಂದಿದೆ.

ಒಟ್ಟು ಮೂವತ್ತು ಅಧ್ಯಾಯಗಳಲ್ಲಿ ಸುಕ್ರಿ ಅವರ ಜೀವನವನ್ನು ಅಕ್ಷತಾ ಕೃಷ್ಣಮೂರ್ತಿ ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಉತ್ತರ ಕನ್ನಡದ ಹಾಲಕ್ಕಿ ಒಕ್ಕಲಿಗ ಸಮುದಾಯದ ಹಿನ್ನೆಲೆಯ ಹಾಗೂ ಅವರ ಕುಂಬ್ರಿ ಬೇಸಾಯ ಪದ್ಧತಿಯ ವಿವರದೊಂದಿಗೆ ಆರಂಭವಾಗುವ ಕೃತಿ, ಸುಕ್ರಿ ಅವರ ಬಾಲ್ಯ ಜೀವನ, ಹೆಸರು ಇಟ್ಟ ಬಗೆ, ಕಲಿತ ಪುಗಡಿ ಕುಣಿತ, ವೈವಾಹಿಕ ಜೀವನ, ಸುಕ್ರಜ್ಜಿಗಿದ್ದ ಔಷಧಿ ಜ್ಞಾನ, ಸಾರಾಯಿ ವಿರುದ್ಧದ ಹೋರಾಟ, ಸಾಕ್ಷರತಾ ಆಂದೋಲನದ ಮಾಹಿತಿ ಎಲ್ಲವನ್ನೂ ಒಳಗೊಂಡಿದೆ.

ಸುಕ್ರಜ್ಜಿ ಹಾಡುವ 31 ಹಾಡುಗಳ ಸಂಗ್ರಹವೂ ಕೃತಿಯಲ್ಲಿದೆ. ‘ಕೊನೆಯದಾಗಿ’ ಎನ್ನುವ ಅಧ್ಯಾಯದಲ್ಲಿ ಮುಂದೆ ಆಗಬೇಕಾದ ಕಾರ್ಯಗಳ ಬಗ್ಗೆಯೂ ಲೇಖಕಿ ಇಲ್ಲಿ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಬರವಣಿಗೆ ಚೊಕ್ಕವಾಗಿದೆ.

ಕೃತಿ: ಹಾಡಿನ ಕಣಜ ಸುಕ್ರಿ ಬೊಮ್ಮಗೌಡ

ಲೇ: ಅಕ್ಷತಾ ಕೃಷ್ಣಮೂರ್ತಿ

ಪ್ರ: ವಿಕಾಸನ, ವಿಜ್ಞಾತಂ ಭವನ

ಸಂ: 9481908555

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT