ತವರಿನ ಸಿರಿ

7

ತವರಿನ ಸಿರಿ

Published:
Updated:
Prajavani

ಪ್ರತಿಯೊಬ್ಬರಿಗೂ ತಮ್ಮ ಕುಟುಂಬದ ಹಳೆಯ ತಲೆಮಾರುಗಳ ನೆನಪು ಒಂದು ರೀತಿ ಪುಳಕ ತರುವ ಸಂಗತಿ. ಹಿರಿಯ ಜೀವಗಳು ಅನುಭವಿಸಿದ ನೋವು, ನಲಿವು, ಕಷ್ಟಕಾರ್ಪಣ್ಯ, ಎದುರಿಸಿದ ಸವಾಲುಗಳು, ಪಡೆದ ಗೆಲುವುಗಳು ಎಲ್ಲವೂ ಕಿರಿಯರಿಗೆ ಜೀವನ ಪಾಠ. ಇನ್ನು ತಮ್ಮ ಪೂರ್ವಿಕರು ಪರೋಪಕಾರ ಗುಣದಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರೆ ಅಂತಹ ಕುಟುಂಬದವರಿಗೆ, ಹಿರೀಕರ ಕುರಿತು ಮತ್ತಷ್ಟು ಹೆಮ್ಮೆ, ಅಭಿಮಾನವೂ ಸೇರಿರುತ್ತದೆ.

ಲೇಖಕಿ ವೇದವತಿ ಕೋದಂಡರಾಮ್ ಅವರಿಗೂ ಹೀಗೆಯೇ ತಮ್ಮ ತವರಿನ ಕುಟುಂಬದ ಕುರಿತು ಇನ್ನಷ್ಟು ಹೆಚ್ಚು ಅಕ್ಕರೆ, ಅಭಿಮಾನ. ಅಜ್ಜಿ ಹಾಗೂ ತಾಯಿಯಿಂದ ಕೇಳಿ ತಿಳಿದ ತವರುಮನೆಯ ಇತಿಹಾಸದ ಸವಿಸ್ತಾರ ಚಿತ್ರಣವನ್ನು ಲೇಖಕಿ ಇಲ್ಲಿ ನೇರನುಡಿಗಳಲ್ಲಿ ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ದೊಡ್ಡ ಕುಟುಂಬದ ಕವಲು, ಉಪಕವಲುಗಳ ಪರಿಚಯ ಇಲ್ಲಿದೆ. ಸುಮಾರು ಒಂದೂವರೆ ಶತಮಾನದ ಅವಧಿಯ ಸಂಗತಿಗಳನ್ನು ದಾಖಲಿಸುವ ಮೂಲಕ ಆ ಕಾಲದ ಸಾಂಸ್ಕೃತಿಕ ಬದುಕಿನ ಪರಿಚಯ ಮಾಡಿಕೊಟ್ಟಿದ್ದಾರೆ.

ಆಂಧ್ರಪ್ರದೇಶದಿಂದ ವಲಸೆ ಬಂದ ಉದ್ಯಮಿಗಳ ಕುಟುಂಬವೊಂದು ಕರ್ನಾಟಕದಲ್ಲಿ ಸಾಮಾಜಿಕ ವಲಯಕ್ಕೆ ಕೊಡುಗೆ ನೀಡಿದ ಹಿಂದಿನ ಕಥೆ ಇಲ್ಲಿ ತಿಳಿದುಬರುತ್ತದೆ.

ತವರಿನ ಸಿರಿ

ವೇದವತಿ ಕೋದಂಡರಾಮ್

ಪುಟ: 208

ಬೆಲೆ: ರೂ 300

ಪ್ರ: ಅರವಿಂದ ಪ್ರಕಾಶನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !