ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ವಿಶ್ವ ನೃತ್ಯ ದಿನ: ಇನ್‌ಸ್ಟಾಗ್ರಾಂನಲ್ಲಿ ನೃತ್ಯೋತ್ಸವ

Last Updated 28 ಏಪ್ರಿಲ್ 2020, 8:46 IST
ಅಕ್ಷರ ಗಾತ್ರ

ಬೆಂಗಳೂರು:ಏಪ್ರಿಲ್‌ 29 ವಿಶ್ವ ನೃತ್ಯ ದಿನ. ಪ್ರತಿವರ್ಷ ಈ ದಿನದಂದು ಬೆಂಗಳೂರಿನ ನೃತ್ಯ ಕೇಂದ್ರಗಳು, ಸಭಾಂಗಣಗಳು ನೃತ್ಯ ಸಂಬಂಧಿತ ಕಾರ್ಯಕ್ರಮಗಳಿಂದ ಭರ್ತಿಯಾಗಿರುತ್ತಿದ್ದವು. ಆದರೆ ಈ ಬಾರಿ ಕೊರೊನಾ ಸೋಂಕಿನಿಂದಾಗಿ ಅಂತರ ಕಾಯ್ದು ಕೊಳ್ಳುವಿಕೆ ಹಾಗೂ ಲಾಕ್‌ಡೌನ್ ಪರಿಣಾಮವಾಗಿ ಕಲಾವಿದರು ತಮ್ಮ ಪ್ರತಿಭೆ, ಕಲಾ ಪ್ರದರ್ಶನಕ್ಕಾಗಿ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.

ಡಿಜಿಟಲ್‌ ಮಾಧ್ಯಮದ ಮೂಲಕ ಮನೆಯಲ್ಲಿ ಲಾಕ್‌ಡೌನ್ ಆಗಿರುವ ಕಲಾವಿದರ ಬಳಿಗೆ ನೃತ್ಯ ಕಾರ್ಯಕ್ರಮಗಳನ್ನು ಕೊಂಡೊಯ್ಯಲು ನಿರ್ಧರಿಸಿದ್ದಾರೆ. ನಗರದ ನೂಪುರ ಭರತನಾಟ್ಯ ಕೇಂದ್ರ ಇದೇ 29ರಂದು ‘ಸಖ್ಯ‘ ಎಂಬ ಆನ್‌ಲೈನ್ ನೃತ್ಯೋತ್ಸವವನ್ನು ಆಯೋಜಿಸುತ್ತಿದೆ. ಅಂತರರಾಷ್ಟ್ರೀಯ ನೃತ್ಯ ದಿನವನ್ನು ಡಿಜಿಟಲ್‌ ವೇದಿಕೆ ಮೂಲಕ ವಿಶಿಷ್ಟವಾಗಿ ಆಚರಿಸಲು ಈ ನೃತ್ಯ ಕೇಂದ್ರ ಸಿದ್ಧವಾಗಿದ್ದು, ಈ ಕಾರ್ಯಕ್ರಮವನ್ನು ಇನ್‌ಸ್ಟಾಗ್ರಾಂ ಮೂಲಕ ವೀಕ್ಷಿಸಬಹುದು.

‘ಸಖ್ಯ’ ಆನ್‌ಲೈನ್‌ ನೃತ್ಯೋತ್ಸವದಲ್ಲಿ ಹಿರಿಯ ನೃತ್ಯಗಾರರು ವಿಶೇಷ ನೃತ್ಯಗಳ ಪ್ರದರ್ಶನ ನೀಡಲಿದ್ದಾರೆ. ಕೊರಿಯೋಗ್ರಾಫರ್, ಗುರು ಡಾ. ಲಲಿತಾ ಶ್ರೀನಿವಾಸನ್‌ ಅವರು ಮೈಸೂರು ಬನಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಜಾವಳಿ, ಪದ, ಅಷ್ಟಪದಿ ಮತ್ತು ಸಪ್ತಪದಿಗಳನ್ನು ನೃತ್ಯದ ಮೂಲಕ ತೋರಿಸಲಿದ್ದಾರೆ. ಈ ಕೇಂದ್ರದಲ್ಲಿ ಕಲಿತ, ಸದ್ಯ ದೇಶದ ಬೇರೆ ಬೇರೆ ಭಾಗಗಳಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶನ ಮಾಡಲಿದ್ದಾರೆ. ರಂಜಿತಾ ವಿವಿನ್‌, ಅಜಯ್‌ ವಿಶ್ವನಾಥ್‌, ಮಾಳವಿಕಾ ವೆಂಕಟಸುಬ್ಬಯ್ಯ, ಶ್ರೀಮತಿ ಎಸ್‌. ಮದೋಳ್ಕರ್‌ ಮೊದಲಾದವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಸಖ್ಯ ಅಂತರರಾಷ್ಟ್ರೀಯ ಆನ್‌ಲೈನ್‌ ನೃತ್ಯೋತ್ಸವ

ನೃತ್ಯೋತ್ಸವ ನೋಡಲು –@nityanritya (Instagram)

ಸಮಯ– ಏಪ್ರಿಲ್‌ 29 ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT