ಕೂಚಿಪುಡಿ ಸಾಧನೆಗೆ ಪ್ರಶಸ್ತಿ

7

ಕೂಚಿಪುಡಿ ಸಾಧನೆಗೆ ಪ್ರಶಸ್ತಿ

Published:
Updated:
Deccan Herald

ಕೂಚಿಪುಡಿ ನೃತ್ಯ ರಂಗದ ಹಳೆಯ ತಲೆಮಾರಿನ ಬೆರಳೆಣಿಕೆಯ ವಿದ್ವಾಂಸರಲ್ಲಿ ಆಂಧ್ರಪ್ರದೇಶದ, ಗುರು ಪಶುಮಾರ್ಥಿ ರಟ್ಟಯ್ಯ ಶರ್ಮ ಒಬ್ಬರು.

77ರ ಹರೆಯದ ಶರ್ಮ ಅವರು ಕೂಚಿಪುಡಿ ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿರುವ ಜೀವಮಾನದ ಸೇವೆಗಾಗಿ ‘ಜಸ್ಟಿಸ್‌  ಜಗನ್ನಾಥ ಶೆಟ್ಟಿ ಮತ್ತು ಶಾಂತಲಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತಿದೆ. ನಗರದ ಆತ್ಮಾಲಯ ಅಕಾಡೆಮಿ ಆಫ್‌ ಆರ್ಟ್‌ ಆ್ಯಂಡ್‌ ಕಲ್ಚರ್‌ ಟ್ರಸ್ಟ್‌ ಆಶ್ರಯದಲ್ಲಿ ಆಗಸ್ಟ್‌ 15ರಂದು ಈ ಕಾರ್ಯಕ್ರಮ ನಡೆಯಲಿದೆ. 

ಬುಧವಾರ ಸಂಜೆ 5.30ಕ್ಕೆ ಅಮೆರಿಕದ ಯುನಿವರ್ಸಿಟಿ ಆಫ್‌ ಸಿಲಿಕಾನ್‌ ಆಂಧ್ರದ ಪ್ರಾಧ್ಯಾಪಕಿ ಡಾ.ಪಿ.ರಮಾದೇವಿ ಅವರ ಕೂಚಿಪುಡಿ ನೃತ್ಯದೊಂದಿಗೆ ಉದ್ಘಾಟನೆಗೊಳ್ಳಲಿದೆ. ನಂತರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ‘ಆತ್ಮಾಲಯ’ದ ಕಿರಿಯ ವಿದ್ಯಾರ್ಥಿಗಳಿಂದ ನೃತ್ಯ ಪ್ರಸ್ತುತಿ. ಪ್ರಶಸ್ತಿ ಪುರಸ್ಕೃತರು– ಕೇರಳದ ಪಲ್ಲಾಶಣ ಚಂದ್ರನ್‌ ಮಾರಾರ್‌, ತುಳಸಮ್ಮ ಮತ್ತು ಸುಧಾ ದೊರೈಸ್ವಾಮಿ ಚಂದ್ರಶೇಖರ್‌ ಮಿಚಿಗನ್‌.

ರಾತ್ರಿ 7ಕ್ಕೆ ಮುಂಬೈನ ಭಾರತಿ ಮೂರ್ತಿ ಅವರಿಂದ ನೈಟಿಂಗೇಲ್ ನೃತ್ಯ ರೂಪಕ, ಬೆಂಗಳೂರಿನ ನವಿಯಾ ನಟರಾಜನ್‌ ಅವರಿಂದ ಭರತನಾಟ್ಯ, ಬೆಂಗಳೂರಿನ ಸಂಪದಾ ಪಿಳ್ಳೈ ಮತ್ತು ಕೋಲ್ಕತ್ತಾದ ಶಿಖಾ ಭಟ್ಟಾಚಾರ್ಯ ಅವರಿಂದ ಕೂಚಿಪುಡಿ ಯುಗಳ. 

ಸ್ಥಳ: ಹಾರ್ಮೊನಿ ಹಾಲ್‌, ತಾಜ್‌ ಯಶವಂತಪುರ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !