ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಸಂಕ್ರಾಂತಿ

Last Updated 29 ಜನವರಿ 2019, 20:00 IST
ಅಕ್ಷರ ಗಾತ್ರ

ಕೆ .ಆರ್.ಪುರ ಸಮೀಪದ ಬಸವನಪುರದ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಸಿಲಿಕಾನ್ ಸಂಕ್ರಾಂತಿ ಸುಗ್ಗಿ- 2019 ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಕಾಲೇಜು ಆವರಣವನ್ನು ಗ್ರಾಮೀಣ ಶೈಲಿಯಲ್ಲಿ ಅಂದಗೊಳಿಸಲಾಗಿತ್ತು. ಹಸುಗಳ ಸಗಣಿಯಿಂದ ನೆಲ ಹದಗೊಳಿಸಿ ದವಸ ಧಾನ್ಯಗಳ (ಕಣ) ರಾಶಿ ಮಾಡಿ ಆಲಂಕಾರಗೊಳಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳು ಆವರಣದಲ್ಲಿ ಕಬ್ಬು, ರಾಗಿ, ಭತ್ತ, ಮಾವಿನ ತೊಪ್ಪು, ತೆಂಗಿನ ಗರಿಗಳನ್ನು ಹೆಣೆದು ತಳಿರು ತೋರಣಗಳನ್ನು ನಿರ್ಮಿಸಿದ್ದರು. ವಿದ್ಯಾರ್ಥಿನಿಯರು ಚಿತ್ತಾಕರ್ಷಕ ರಂಗೋಲಿ ಬಿಡಿಸಿದ್ದರು.

ಪಂಚೆ, ನೆರಿಗೆಯ ಸೀರೆ, ಶಾಲು ವಸ್ತ್ರಗಳನ್ನು ಧರಿಸುವ ಮೂಲಕ ಪಕ್ಕ ’ದೇಸಿ ಸ್ಟೈಲ್‌‘ನಲ್ಲಿ ವಿದ್ಯಾರ್ಥಿಗಳು ಕಾಣಿಸಿಕೊಂಡರು. ಹೆಗಲ ಮೇಲೆ ಶಾಲು, ತಲೆಗೆ ಮೈಸೂರು ಪೇಟಾ, ಹಣೆಗೆ ನಾಮ ಧರಿಸಿ ವಿಶೇಷ ಲುಕ್ ನಲ್ಲಿ ಮಿಂಚಿದರು. ಆಧುನಿಕ ವಸ್ತ್ರ ವಿನ್ಯಾಸದ ಸೂಟುಬೂಟು, ಕೋಟು ಧರಿಸಿ ಕ್ಯಾಟ್‌ ವಾಕ್ ಮಾಡಿದರು. ಮಿಮಿಕ್ರಿ, ಭಾವಗೀತೆ, ನಾಡಗೀತೆ, ಸಮೂಹ ಗಾಯನ ಹಾಡಿ ಸಂಭ್ರಮಿಸಿದರು.

ಬೆಲ್ಲ ಒಣಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೆಕಾಯಿ ಹಾಗೂ ಎಳ್ಳಿನಿಂದ ತಯಾರಿಸಿದ ಸಿಹಿಯೊಂದಿಗೆ ಶುಭಾಶಯ ವಿನಿಯಮ ಮಾಡಿಕೊಂಡರು.

ಗಾಳಿಪಟ ಉತ್ಸವ, ರಂಗೋಲಿ ಸ್ಪರ್ಧೆ, ಸೈಕ್ಲಿಂಗ್ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಹೊಡೆಯುವ ಸ್ಪರ್ಧೆ, ಹಗ್ಗಜಗ್ಗಾಟ, ಗೊಣಿಚೀಲದ ಕಪ್ಪೆ ಓಟ, ನಿಂಬೆಹಣ್ಣು ಸ್ಪರ್ಧೆ, ಕುರ್ಚಿ ಆಟಗಳು ಹಾಗೂ ಸಾಂಸ್ಕೃತಿಕ ನೃತ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಕೆ.ಆರ್.ಪುರ ಪೊಲೀಸ್‌ ವೃತ್ತ ನಿರೀಕ್ಷಕ ಜಯರಾಜ್ ಸಿಲಿಕಾನ್ ಸಂಕ್ರಾಂತಿ ಸುಗ್ಗಿ-2019 ಕಾರ್ಯಕ್ರಮ ಉದ್ಘಾಟಿಸಿದರು. ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ಹೆಚ್.ಎಂ.ಚಂದ್ರಶೇಖರ್ ಮಾತನಾಡಿದರು. ಕಾಲೇಜಿನ ನಿರ್ದೇಶಕ ಎಚ್.ಎಂ.ಮುಕುಂದ್, ಶೈಕ್ಷಣಿಕ ನಿರ್ದೇಶಕರಾದ ರೋಸ್ಕವಿತ, ಸಮಾಜ ಸೇವಕರಾದ ಜೋಸೆಫ್ ರವಿ ಹಾಗೂ ನೀಲಕಂಠ ಮೂರ್ತಿ, ಪ್ರಾಂಶುಪಾಲರಾದ ಜ್ಞಾನೇಶ್, ಆದಿಲಕ್ಷ್ಮಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT