ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಕ್ಷದೇಗುಲ ಸನ್ಮಾನ್‌’ ಪ್ರಶಸ್ತಿ ಪ್ರದಾನ

Last Updated 18 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಯಕ್ಷದೇಗುಲ ಸಂಸ್ಥೆಯು ನಯನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪ್ರಸಾದನ ಕಲಾವಿದ ಶಾಂತರಾಮ ಆಚಾರ್ಯ (ಮರಿ ಆಚಾರ್) ಅವರಿಗೆ ‘ಯಕ್ಷದೇಗುಲ ಸನ್ಮಾನ- 2019’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬ್ರಹ್ಮಾವರದ ಶಾಂತರಾಮ ಆಚಾರ್ಯ ಅವರು 48 ವರ್ಷಗಳಿಂದ ಯಕ್ಷಗಾನ ಪ್ರಸಾದನ ಕಲಾವಿದರಾಗಿ ಅನುಪಮ ಕಲಾಸೇವೆಯಲ್ಲಿ ತೊಡಗಿದ್ದಾರೆ.

ಯಕ್ಷದೇಗುಲ ಸಂಸ್ಥೆಯು 25 ವರ್ಷಗಳಿಂದ ಸಾಧಕ ಕಲಾವಿದರನ್ನು ಗುರುತಿಸಿ ನಗದು ಪುರಸ್ಕಾರದೊಂದಿಗೆ ಸನ್ಮಾನಿಸುತ್ತಾ ಬಂದಿದೆ.

ಕಾರ್ಯಕ್ರಮದಲ್ಲಿ ಕೆ. ಮೋಹನ್ ನಿರ್ದೇಶನದಲ್ಲಿ ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನ ನಡೆಯಿತು. ಕಲಾವಿದರಾಗಿ ಭಾಗವತ ಲಂಬೋದರ ಹೆಗಡೆ, ಪ್ರಿಯಾಂಕ ಕೆ. ಮೋಹನ್, ಮದ್ದಲೆಯಲ್ಲಿ ಗಣಪತಿ ಭಟ್, ಚಂಡೆಯಲ್ಲಿ ಮಾಧವ ಮತ್ತು ಮಂಜುನಾಥ ನಾವುಡರು ಸಹಕರಿಸಿದರು. ಮುಮ್ಮೇಳದಲ್ಲಿ ಸುಜಯೀಂದ್ರ ಹಂದೆ, ತಮ್ಮಣ್ಣ ಗಾಂವ್ಕರ್, ಪ್ರಶಾಂತ್ ಹೆಗಡೆ, ಗಣೇಶ ಉಪ್ಪುಂದ, ನರಸಿಂಹ ತುಂಗ, ಮನೋಜ್ ಭಟ್, ಉದಯ ಭೋವಿ ಭಾಗವಹಿಸಿದ್ದರು. ಕೋಟ ಸುದರ್ಶನ ಉರಾಳ ಕಾರ್ಯಕ್ರಮದ ಸಂಯೋಜನೆ ಮಾಡಿದ್ದರು.

ಕಾರ್ಯಕ್ರಮದಲ್ಲಿ ಆಡಳಿತ ಮತ್ತು ಹಣಕಾಸು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಶೇರುಗಾರ, ಯಕ್ಷಗಾನ ವಿದ್ವಾಂಸ ಡಾ. ಆನಂದರಾಮ ಉಪಾಧ್ಯ, ಯಕ್ಷಗಾನ ಪ್ರೋತ್ಸಾಹಕ ಕೆ. ಪುರುಷೋತ್ತಮ ಅಡಿಗ, ಯಕ್ಷದೇಗುಲದ ಅಧ್ಯಕ್ಷ ಬಾಲಕೃಷ್ಣ ಭಟ್, ಯಕ್ಷದೇಗುಲದ ನಿರ್ದೇಶಕರಾದ ಕೆ. ಮೋಹನ್, ವೀಣಾ ಮೋಹನ್, ಯಕ್ಷಗುರು ಪ್ರಿಯಾಂಕ ಕೆ. ಮೋಹನ್, ಭಾಗವತ ಲಂಬೋದರ ಹೆಗಡೆ ಮತ್ತು ವಿಶ್ವನಾಥ ಉರಾಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT