ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ಕಣ್ಣು: ಜಾಗರೂಕರಾಗಿ

Dry Eyes-Dr.Raghunagaraj
Last Updated 19 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಶೇಕಡ 10 ರಿಂದ 15ರಷ್ಟು ಜನರು ಡ್ರೈ ಐಸ್‍ನಿಂದ ಬಳಲುತ್ತಿದ್ದಾರೆ. ಇವರಲ್ಲಿ ಬಹುತೇಕರು ಇವಾಪೊರೇಟಿವ್ ಡ್ರೈನೆಸ್‍ನಿಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಹವಾಮಾನ. ಬಳಸುತ್ತಿರುವ ಏರ್ ಕಂಡಿಷನರ್‌ಗಳು ಮತ್ತು ಅತಿ ಹೆಚ್ಚು ಕಂಪ್ಯೂಟರ್ ಬಳಕೆ.

ಡ್ರೈನೆಸ್ ಕ್ಯಾಬ್ ಚಾಲಕರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಏಕೆಂದರೆ, ಅವರು ಹೆಚ್ಚಾಗಿ ಹವಾನಿಯಂತ್ರಿತ ಕಾರಿನಲ್ಲಿ ಕುಳಿತಿರುತ್ತಾರೆ. ಇದಲ್ಲದೇ, ಅನಾರೋಗ್ಯ, ಆಹಾರ ಪದ್ಧತಿ ಮತ್ತು ಜೀವನಶೈಲಿಗಳೂ ಮೆಬೊಮಿಯನ್ ಗ್ಲ್ಯಾಂಡ್ ಸೆಕ್ರೆಯೇಷನ್ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಇದರ ಪರಿಣಾಮ ಇವಾಪೊರೇಟಿವ್ ಡ್ರೈಐ ಆಗುವ ಸಾಧ್ಯತೆಗಳಿವೆ.

ಅದೃಷ್ಟವಶಾತ್, ಈ ಡ್ರೈ ಐ ಅನ್ನು ಆರಂಭಿಕ ಹಂತದಲ್ಲಿಯೇ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸಬಹುದಾಗಿದೆ. ಕಣ್ಣಿನ ಅಸ್ವಸ್ಥತೆ, ದಣಿವಾಗುವುದು, ಕಿರಿಕಿರಿಯಾಗುವುದು ಮತ್ತು ಕಣ್ಣು ಕೆಂಪಾಗುವುದು ಈ ಡ್ರೈ ಐನ ಲಕ್ಷಣ. ಒಂದು ವೇಳೆ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದೇ ಹೋದಲ್ಲಿ ದೃಷ್ಟಿ ಮಂಪರಾಗುವುದು, ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳುವುದು, ಕಂಪ್ಯೂಟರ್‌ನಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿರುವುದು ಸೇರಿದಂತೆ ಇನ್ನೂ ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಒಣ ಕಣ್ಣಿನ ಸಮಸ್ಯೆ ಎದುರಿಸುತ್ತಿರುವವರು ಗುಣಮಟ್ಟದ ಕಣ್ಣೀರನ್ನು ಹೊಂದಿರುವುದಿಲ್ಲ. ಇದರಿಂದ ಕಣ್ಣನ್ನು ಕಣ್ಣೀರಿನಿಂದ ನಯಗೊಳಿಸಲು ಮತ್ತು ಶುಚಿಗೊಳಿಸಲು ಸಾಧ್ಯವಾಗುವುದಿಲ್ಲ. ಕಣ್ಣೀರಿನ ಸಮತೋಲನವನ್ನೂ ಮಾಡಲಾಗದು.

ಕಣ್ಣಿನ ಮುಂಭಾಗದ ಮೇಲ್ಮೈ ಮತ್ತು ಉತ್ತಮ ದೃಷ್ಟಿಗಾಗಿ ಕಣ್ಣೀರಿನ ಅಗತ್ಯವಿದೆ. ಒಮ್ಮೆ ವ್ಯಕ್ತಿಯು ಕಣ್ಣಿನ ರೆಪ್ಪೆಯನ್ನು ಬಡಿದರೆ ಕಣ್ಣೀರು ಕಾರ್ನಿಯಾ ಸುತ್ತಮುತ್ತ ಹರಿಯುತ್ತದೆ. ಇದರಿಂದ ಕಣ್ಣನ್ನು ನಯಗೊಳಿಸುವುದು, ಕಣ್ಣಿನ ಮೇಲೆ ಬೀರಬಹುದಾದ ಸೋಂಕು (ಇನ್‍ಫೆಕ್ಷನ್) ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣನ್ನು ನಯವಾದ ರೀತಿಯಲ್ಲಿ ಸ್ವಚ್ಛಗೊಳಿಸುವುದಲ್ಲದೇ ಸ್ಪಷ್ಟಗೊಳಿಸುತ್ತದೆ. ಹೆಚ್ಚುವರಿಯಾಗಿ ಬರುವ ಕಣ್ಣೀರು ಕಣ್ಣುರೆಪ್ಪೆಗಳ ಭಾಗದಲ್ಲಿ ಹರಿದಾಡಿ ಕಣ್ಣಿನ ಸಣ್ಣಸಣ್ಣ ಮೂಲೆಗಳಿಗೂ ಹೋಗಿ ಮೂಗಿನ ಹಿಂಭಾಗಕ್ಕೆ ಹೋಗಿ ನಿಲ್ಲುತ್ತದೆ.

ಉತ್ತಮ ಕಣ್ಣಿನ ಆರೋಗ್ಯಕ್ಕೆ ಪೂರಕವಾದ ಕಣ್ಣೀರಿನ ಉತ್ಪಾದನೆ ಆಗದಿದ್ದ ಸಂದರ್ಭದಲ್ಲಿ ಒಣ ಕಣ್ಣು ಉಂಟಾಗುತ್ತದೆ. ನಾವು ಈ ಒಣ ಕಣ್ಣನ್ನು ಎರಡು ಬಗೆಯಲ್ಲಿ ವಿಶ್ಲೇಷಿಸಬಹುದಾಗಿದೆ. ಇವಾಪರೇಟಿವ್ ಡ್ರೈನೆಸ್ (ಆವಿಯಾಗುವ ಶುಷ್ಕತೆ). ಇದು ಒಣ ಕಣ್ಣಿನ ಸಾಮಾನ್ಯ ಲಕ್ಷಣವಾಗಿದ್ದು, ಡ್ರೈ ಐಸ್ ಸಿಂಡ್ರೋಮ್ ಆಗಿರುತ್ತದೆ. ಸ್ಪಷ್ಟತೆಯ ಕೊರತೆ, ಕಣ್ಣೀರಿನ ಉತ್ಪಾದನೆ ಅಸಮರ್ಪಕವಾಗಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಪ್ರತಿರೋಧಕ ಶಕ್ತಿ ಕಡಿಮೆ ಇರುತ್ತದೆ. ರೇಡಿಯೇಷನ್ ಟ್ರೀಟ್‍ಮೆಂಟ್, ಡಯಾಬಿಟೀಸ್, ವಿಟಮಿನ್ ಎ ಕೊರತೆಯಂತಹ ಕಾರಣಗಳಿಂದಲೂ ಈ ಸ್ಪಷ್ಟತೆ ಕೊರತೆ ಎದುರಾಗುತ್ತದೆ. ಲೇಸರ್ ನೆರವಿನ ಇನ್-ಸೈಟ್ ಕೆರಾಟೋಮೈಲೆಸಿಸ್(ಎಲ್‍ಎಎಸ್‍ಐಕೆ)ನಿಂದಲೂ ಬರುತ್ತದೆ. ಕಣ್ಣು ರೆಪ್ಪೆ ತೊಂದರೆ, ಕೆಲವು ಔಷಧಗಳು ಮತ್ತು ಕೆಲವು ಪ್ರಾಕೃತಿಕ ಕಾರಣಗಳಿಂದ ಈ ರೋಗ ಬರುತ್ತದೆ. ಮತ್ತೊಂದೆಡೆ ಇವಾಪೊರೇಟಿವ್ ಡ್ರೈನೆಸ್ ಮೆಬೊಮಿಯನ್ ಗ್ರಂಥಿಯೊಂದಿಗೆ (ಎಂಜಿಡಿ) ಸೇರ್ಪಡೆಯಾಗಿರುತ್ತದೆ ಅಥವಾ ರಚನಾತ್ಮಕವಾಗಿ ಅಸಾಮಾನ್ಯವಾಗಿರುತ್ತದೆ.

ಡ್ರೈಐ ಸಿಂಡ್ರೋಂ ಪ್ರೊಗ್ರೆಸಿವ್ ಪರಿಸ್ಥಿತಿಯಲ್ಲಿರುತ್ತದೆ. ಇದು ವಾಸಿಯಾಗಲಾರದು. ಆದರೆ, ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಬಹುದಾಗಿದೆ. ಕಣ್ಣನ್ನು ಆರಾಮದಾಯಕವಾಗಿ ಇಡಬಹುದಾಗಿದೆ. ಕೆಲವು ಪ್ರಕರಣಗಳಲ್ಲಿ ಕೆಲವೊಮ್ಮೆ ದೃಷ್ಟಿಯಲ್ಲಿ ಸುಧಾರಣೆ ಕಾಣಬಹುದಾಗಿದೆ.

ಏನು ಮಾಡಬೇಕು?

ಆರೋಗ್ಯವಂತ ಜೀವನಶೈಲಿ, ಮೊಬೈಲ್ ಫೋನ್‍ಗಳು ಮತ್ತು ಆರ್ಟಿಫಿಶಿಯಲ್ ಗೆಜೆಟ್‍ಗಳ ಮಿತವಾದ ಬಳಕೆ, ಟಿವಿ ನೋಡುವುದನ್ನು ಕಡಿಮೆ ಮಾಡುವುದರಿಂದ ಡ್ರೈಐನಿಂದ ದೂರ ಇರಬಹುದು. ಮೀನು, ಫ್ಲೆಕ್ಸ್ ಸೀಡ್ಸ್ ಇತ್ಯಾದಿ ಒಮೆಗಾ ಕೊಬ್ಬಿನ ಆಮ್ಲ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಬಳಸುವುದರಿಂದ ಡ್ರೈಐ ಪ್ರಮಾಣವನ್ನು ಕಡಿಮೆ ಮಾಡಬಹುದು. ಆಗ ಪ್ರತಿ 20 ನಿಮಿಷಗಳ ಕಾಲ ಕೆಲಸ ಮಾಡಿದ ನಂತರ ವ್ಯಕ್ತಿಯು 20 ಬಾರಿ ಕಣ್ಣಿನ ರೆಪ್ಪೆಯನ್ನು ಬಡಿಯಬೇಕು ಮತ್ತು ಕೆಲಸದ ಪ್ರತಿ ಎರಡು ಗಂಟೆಗೊಮ್ಮೆ ಸುಮಾರು 20 ಸೆಕೆಂಡುಗಳ ಕಾಲ ಕಣ್ಣನ್ನು ಮುಚ್ಚಬೇಕು ಮತ್ತು 20 ಅಡಿಗಳ ದೂರದಲ್ಲಿರುವ ವಸ್ತುವನ್ನು ನೋಡಬೇಕು.

ಸಮಸ್ಯೆಗೆ ಕಾರಣ
ಕರ್ನಾಟಕದಲ್ಲಿ ಎಂಜಿಡಿ ಬಹುತೇಕ ಐಟಿ ಉದ್ಯಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಂಪ್ಯೂಟರ್‌ ಅನ್ನು ಹೆಚ್ಚು ಬಳಸುವುದರಿಂದ ಈ ದೃಷ್ಟಿ ಕೊರತೆ ಸಮಸ್ಯೆ ಎದುರಾಗುತ್ತದೆ. ಆದರೆ, ಸಾಮಾನ್ಯ ಜನರಲ್ಲಿ ಇದರ ಪ್ರಮಾಣ ಕಡಿಮೆ ಇರುತ್ತದೆ. ಆದಾಗ್ಯೂ, ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಬರುತ್ತಿದೆ. ಅಧ್ಯಯನದ ಪ್ರಕಾರ ಐದು ವರ್ಷಗಳಲ್ಲಿ ಎಂಜಿಡಿ ಪ್ರಕರಣಗಳೊಂದಿಗೆ ಕಣ್ಣಿನ ಆಸ್ಪತ್ರೆ ಬರುತ್ತಿರುವವರ ಸಂಖ್ಯೆಯಲ್ಲಿ ಶೇಕಡ 35 ರಿಂದ ಶೇಕಡ 58 ಕ್ಕೆ ಹೆಚ್ಚಾಗಿದೆ.

ನಗರ ಪ್ರದೇಶಗಳ ಮಧ್ಯಮ ವರ್ಗದ ಯುವ ಸಮುದಾಯ ಗ್ರಾಮಾಂತರ ಪ್ರದೇಶದ ಜನರಿಗಿಂತ ಬಹುಬೇಗನೇ ಇಂತಹ ಸಮಸ್ಯೆಗೆ ತುತ್ತಾಗಬೇಕಾಗುತ್ತದೆ. ಏಕೆಂದರೆ, ನಗರ ಪ್ರದೇಶದ ಯುವ ಸಮುದಾಯ ಹೆಚ್ಚಾಗಿ ಕೃತಕ ಬೆಳಕು, ಸೆಂಟ್ರಲೈಸ್ಡ್ ಎಸಿ ಇರುವ ವಾಹನಗಳು ಮತ್ತು ಮನೆಗಳನ್ನು, ಆರ್ಟಿಫಿಶಿಯಲ್ ಗೆಜೆಟ್ಸ್ ಮೇಲೆ ಅವಲಂಬಿತವಾಗಿರುತ್ತಾರೆ. ಇದಲ್ಲದೇ, ಬಿಸಿಲಿನಲ್ಲಿ ಹೆಚ್ಚು ಓಡಾಡುವುದು ಮತ್ತು ಪರಿಸರ ಮಾಲಿನ್ಯಕ್ಕೆ ಸಿಲುಕಿಕೊಳ್ಳುತ್ತಾರೆ.

ಲೇಖಕರು, ಬೆಂಗಳೂರಿನ ಡಾ.ಅಗರ್‌ವಾಲ್‌ ಕಣ್ಣಿನ ಆಸ್ಪತ್ರೆ ವೈದ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT