ಕಸ ಹೆಕ್ಕುವ ಹಕ್ಕಿಗಳು

ಶನಿವಾರ, ಏಪ್ರಿಲ್ 20, 2019
31 °C

ಕಸ ಹೆಕ್ಕುವ ಹಕ್ಕಿಗಳು

Published:
Updated:

ಫ್ರಾನ್ಸ್‌ನ ಒಂದು ಥೀಮ್‌ ಪಾರ್ಕ್‌ನಲ್ಲಿ ಆರು ರೂಕ್‌ ಹಕ್ಕಿಗಳಿಗೆ ವಿಶೇಷ ತರಬೇತಿಯೊಂದನ್ನು ನೀಡಲಾಗಿದೆ. ಅವು ತ್ಯಾಜ್ಯವನ್ನು ಹೆಕ್ಕಿ, ಪಾರ್ಕ್‌ನಲ್ಲಿರುವ ಒಂದು ಪೆಟ್ಟಿಗೆಗೆ ಹಾಕುತ್ತವೆ.

ಹಾಗೆ ತ್ಯಾಜ್ಯವನ್ನು ಪೆಟ್ಟಿಗೆಗೆ ಹಾಕಿದಾಗಲೆಲ್ಲ, ಅವುಗಳಿಗೆ ಬಹುಮಾನದ ರೂಪದಲ್ಲಿ ತಿಂಡಿ ಸಿಗುತ್ತದೆ. ಈ ರೀತಿ ಮಾಡಿರುವುದರಿಂದಾಗಿ, ಜನ ಪಾರ್ಕ್‌ನಲ್ಲಿ ಕಸ ಎಸೆಯುವ ಮುನ್ನ ತುಸು ಆಲೋಚಿಸುವಂತೆ ಆಗಬಹುದು ಎಂದು ಅಲ್ಲಿನ ಅಧಿಕಾರಿಗಳು ಭಾವಿಸಿದ್ದಾರೆ. ಅಂದಹಾಗೆ, ರೂಕ್‌ ಹಕ್ಕಿಗಳು ಕಾಗೆಯ ಜಾತಿಗೆ ಸೇರಿದವು. ಅವು ತಮ್ಮ ಬುದ್ಧಿವಂತಿಕೆಗೆ ಪ್ರಸಿದ್ಧವಾಗಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !