ಪರೋಪಕಾರಿ ಕಾಡುಕೋಣ

7

ಪರೋಪಕಾರಿ ಕಾಡುಕೋಣ

Published:
Updated:
Prajavani

ಹತ್ತಾರು ಹುಲಿಗಳು ಸೇರಿದವು
ಆನೆಮರಿಯೊಂದನು ಹಿಡಿದವು
ಕೆಳಗಡೆ ಅದನು ಕೆಡವಿದವು
ತಿನ್ನಲು ಜೊಲ್ಲು ಸುರಿಸಿದವು

ಕೆಳಗಡೆ ಬಿದ್ದ ಆನೆಮರಿ
ಬದುಕಲೆಂದು ಹೋರಾಡಿ
ಘೀಳಿಡುತ್ತಿತ್ತು ಜೋರಾಗಿ
ಒದ್ದಾಡುತ್ತಿತ್ತು ಹೊರಳಾಡಿ

ಬಂದಿತಲ್ಲೊಂದು ಕಾಡುಕೋಣ
ನೋಡಿತು ಅದರ ಗೋಳಾಟ
ಒದರಿ ಕರೆಯಿತು ತನಕೂಟ
ಓಡುತ ಬಂದವು ಕಾಡುಕೋಣ

ಹುಲಿಗಳ ಮೇಲೆ ಎರಗಿದವು
ಕೋಡುಗಳಿಂದ ತಿವಿದವು
ಕಾಡುಕೋಣಗಳ ಅರ್ಭಟಕೆ
ಹುಲಿಗಳೆಲ್ಲ ಹೆದರಿದವು

ಆನೆಮರಿಯನು ಬಿಟ್ಟವು
ಒಂದೊಂದಾಗಿ ಓಡಿದವು
ಆನೆಮರಿಯು ಓಡಿ ಹೋಗಿ
ಗಜಪಡೆಯನು ಸೇರಿತು 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !