ಶುಕ್ರವಾರ, ನವೆಂಬರ್ 22, 2019
22 °C

ಸೌರವ್ಯೂಹದಿಂದ ಹೊರಗೆ ಇರುವ ‘K2-236b’ ಗ್ರಹ ಪತ್ತೆ ಮಾಡಿದ್ದು ಭಾರತೀಯರು

Published:
Updated:
Prajavani

ನಮ್ಮ ಸೌರವ್ಯೂಹದ ಆಚೆಗೆ, ಕೋಟ್ಯಂತರ ಕಿಲೋಮೀಟರ್‌ಗಳಷ್ಟು ದೂರದಲ್ಲಿ ಇರುವ ಗ್ರಹವೊಂದನ್ನು ಭಾರತದ ಖಗೋಳ ವಿಜ್ಞಾನಿಗಳು 2018ರಲ್ಲಿ ಪತ್ತೆ ಮಾಡಿದರು. ಈ ಗ್ರಹವು ಸೂರ್ಯನಂತಹ ನಕ್ಷತ್ರವೊಂದನ್ನು (ಸೂರ್ಯನೂ ಒಂದು ನಕ್ಷತ್ರವೇ ಅಲ್ಲವೇ) ಸುತ್ತುತ್ತಿದೆ. ಈ ಗ್ರಹವು ಭೂಮಿಯಿಂದ ಸುಮಾರು 600 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಇದೆ.

ಜ್ಯೋತಿರ್ವರ್ಷ ಅಂದರೆ ಗೊತ್ತಾಯಿತಲ್ಲ? ಬೆಳಕು ಒಂದು ಸೆಕೆಂಡಿಗೆ 2,99,792 ಕಿಲೋ ಮೀಟರ್‌ ದೂರವನ್ನು ಕ್ರಮಿಸಿರುತ್ತದೆ. ಇಂತಹ ಬೆಳಕು ಆರುನೂರು ವರ್ಷಗಳಲ್ಲಿ ಎಷ್ಟು ದೂರ ಸಾಗುತ್ತದೆಯೋ, ಅಷ್ಟು ದೂರದಲ್ಲಿ ಇದೆ ಈ ಗ್ರಹ!

ಸೌರವ್ಯೂಹದ ಆಚೆಗೂ ಇರುವ ಗ್ರಹಗಳನ್ನು ಪತ್ತೆ ಮಾಡುವ ತಂತ್ರಜ್ಞಾನ ಭಾರತದ ಬಳಿ ಇದೆ ಎಂಬುದನ್ನು ಈ ಗ್ರಹವನ್ನು ಪತ್ತೆ ಮಾಡುವ ಮೂಲಕ ವಿಜ್ಞಾನಿಗಳು ಜಗತ್ತಿಗೆ ಸಾರಿದಂತೆ ಆಗಿದೆ.

ಅಂದಹಾಗೆ, ಸೌರಮಂಡಲದ ಆಚೆಗಿನ ಗ್ರಹ ಅಂದರೆ ಏನು?
ಇದು ನಾವು ಇರುವ ಸೌರವ್ಯೂಹದಿಂದ ಹೊರಗೆ ಇರುವ ಗ್ರಹ. ನಮ್ಮ ಭೂಮಿಯು ಒಬ್ಬ ಸೂರ್ಯನ ಸುತ್ತ ಸುತ್ತುತ್ತ ಇರುವಂತೆಯೇ, ಈ ಗ್ರಹ ಕೂಡ ಇನ್ನೊಂದು ಸೂರ್ಯನ ಸುತ್ತ ಸುತ್ತುತ್ತಿದೆ. ಒಟ್ಟು 2,834 ಸೌರವ್ಯೂಹಗಳಲ್ಲಿ ಒಟ್ಟು 3,786 ಗ್ರಹಗಳು ಇರುವುದು ಇದುವರೆಗೆ ಖಚಿತವಾಗಿದೆ.

ಈ ಗ್ರಹಕ್ಕೆ ಯಾವ ಹೆಸರು ಇಡಲಾಗಿದೆ?
ಇದಕ್ಕೆ K2-236b ಎಂಬ ಹೆಸರನ್ನು ವಿಜ್ಞಾನಿಗಳು ಇರಿಸಿದ್ದಾರೆ. ಇದು ಸುತ್ತುಹಾಕುತ್ತಿರುವ ನಕ್ಷತ್ರದ (ಅಂದರೆ ನಮ್ಮ ಸೂರ್ಯನಂತಹ ನಕ್ಷತ್ರ) ಹೆಸರು K2-236.

ಈ ಗ್ರಹವನ್ನು ಪತ್ತೆ ಮಾಡಿದ್ದು ಯಾರು?
ಇದನ್ನು ಅಭಿಜಿತ್ ಚಕ್ರವರ್ತಿ ನೇತೃತ್ವದ ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ. ಇವರು ಅಹಮದಾಬಾದ್‌ನ ಭೌತ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿಗಳು. ಈ ವಿಜ್ಞಾನಿಗಳ ತಂಡವು ಈ ಗ್ರಹವನ್ನು ನೇರವಾಗಿ ಕಂಡಿಲ್ಲ. ಆದರೆ, ಈ ಗ್ರಹ ಇರುವ ಸೌರಮಂಡಲದ ನಕ್ಷತ್ರವು ಸೂಸಿದ ಬೆಳಕಿನ ಕಿರಣಗಳಲ್ಲಿ ಆದ ಬದಲಾವಣೆಯನ್ನು ಆಧರಿಸಿ, ಈ ಗ್ರಹದ ಅಸ್ತಿತ್ವವನ್ನು ಕಂಡುಕೊಂಡಿದೆ ವಿಜ್ಞಾನಿಗಳ ತಂಡ.

ಈ ಗ್ರಹದ ಗುಣ ವೈಶಿಷ್ಟ್ಯಗಳು ಏನು?
ಇದು ಭೂಮಿಗಿಂತ ದೊಡ್ಡದು. ಇದರ ಮೇಲ್ಮೈ ತಾಪಮಾನ ಅಂದಾಜು 6000 ಡಿಗ್ರಿ ಸೆಲ್ಸಿಯಸ್.

ಪ್ರತಿಕ್ರಿಯಿಸಿ (+)