‘ಮಾಸ್ಟರ್ಸ್ ಆಫ್ ಕರ್ನಾಟಕ’

‘ಮಾಸ್ಟರ್ಸ್ ಆಫ್ ಕರ್ನಾಟಕ’ ಎನ್ನುವ ಡಿಜಿಟಲ್ ಸಂಗೀತ ಕಛೇರಿಗಳ ಸರಣಿಯನ್ನು ಧ್ರುವ ಆರ್ಟ್ಸ್, ಯುಕೆ ಮತ್ತು ಪ್ರತಿಷ್ಠಿತ ಲಂಡನ್ ಇಂಟರ್‌ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್‍ನ ಕ್ಯುರೇಟರ್ ಆಯೋಜಿಸುತ್ತಿದೆ. ಈ ಸರಣಿಯನ್ನು ಖ್ಯಾತ ವಯೋಲಿನ್ ವಾದಕಿ ಡಾ.ಜೋತ್ಸ್ನಾ ಶ್ರೀಕಾಂತ್ ಸಂಯೋಜಿಸುತ್ತಿದ್ದಾರೆ.
ಪ್ರತೀ ತಿಂಗಳಿಗೊಮ್ಮೆ ಕಛೇರಿಗಳು ಜರುಗಲಿವೆ. ಕಛೇರಿಗಳ ವಿಡಿಯೊಗಳನ್ನು ವೀಕ್ಷಿಸಲು ಟಿಕೆಟ್ ಖರೀದಿಸಬೇಕು. ಟಿಕೆಟ್‌ಗಳು www.tikkl.com/dhruvarts ಇಲ್ಲಿ ಲಭ್ಯ ಇವೆ.
2021ರ ನವೆಂಬರ್‌ನಲ್ಲಿ ಎಸ್.ಶಂಕರ್ ಹಾಗೂ ಎಂ.ಎಸ್.ಶೀಲಾ ಅವರು ಕಛೇರಿಗಳು ಇವೆ. ಡಿಸೆಂಬರ್‌ನಲ್ಲಿ ಸುಮಾ ಸುಧೀಂದ್ರ, 2022ರ ಜನವರಿಯಲ್ಲಿ ನಾಗಮಣಿ ಶ್ರೀನಾಥ್, ಫೆಬ್ರುವರಿಯಲ್ಲಿ ಮೈಸೂರು ಸಹೋದರರು, ಮಾರ್ಚ್‌ನಲ್ಲಿ ಡಾ.ಟಿ.ಎಸ್.ಸತ್ಯವತಿ, ಏಪ್ರಿಲ್‌ನಲ್ಲಿ ರುದ್ರಪಟ್ಟಣಂ ಸಹೋದರರು ಮತ್ತು ಮೇ ನಲ್ಲಿ ಆರ್.ಕೆ.ಪದ್ಮನಾಭ ಅವರ ಕಛೇರಿಗಳು ನಡೆಯಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.