ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಡಿಕೆ ತಂತಿ ಮೀಟುತ್ತಾ...

Last Updated 21 ಜೂನ್ 2020, 19:30 IST
ಅಕ್ಷರ ಗಾತ್ರ

ಚೌಡಿಕೆಯ ತಂತಿ ಮೀಟುತ್ತಾ, ಸಹ ಕಲಾವಿದರ ಕೋರಸ್‌ನೊಂದಿಗೆ ಸವದತ್ತಿ ಯಲ್ಲಮ್ಮನನ್ನು ಧ್ಯಾನಿಸುತ್ತಾ ಮನತುಂಬಿ ಹಾಡಿದರು ಅಂತರರಾಷ್ಟ್ರೀಯ ಖ್ಯಾತಿಯ ಚೌಡಿಕೆ ಪದಗಳ ಹಾಡುಗಾರ್ತಿ ಅಥಣಿಯ ರಾಧಾಬಾಯಿ ಮಾದರ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಧಾಭಾಯಿ, ‘ಪ್ರಜಾವಾಣಿ’ಭಾನುವಾರದ ಆಯೋಜಿಸಿದ್ದ ‘ಫೇಸ್‌ಬುಕ್‌ ಲೈವ್‌’ನಲ್ಲಿ ಒಂದು ಗಂಟೆಗಳ ಕಾಲ ಹಲವುಚೌಡಿಕೆ ಪದಗಳ ನಾದದ ಸುಧೆ ಹರಿಸಿದರು.

ಚೌಡಕಿಯ ವಿಶಿಷ್ಟ ನಾದದೊಂದಿಗೆ ‘ನಮೋ ನಮೋ ರೇಣುಕಾ ದೇವಿ.. ಮಾಡುವೆ ನಿನ್ನ ಸ್ತುತಿ..’ ಎಂಬ ರೇಣುಕಾದೇವಿಯ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದರು ರಾಧಾಬಾಯಿ ಮತ್ತು ತಂಡ. ಈ ತಂಡದ ಪದಗಳಿಗೆ ಸಾವಿರಾರು ವೀಕ್ಷಕರು ‘ಉಧೋ ಉಧೋ...’ ಎಂದರು.

‘ಸ್ವರ್ಗ ಲೋಕ – ಪಾತಾಳ ಲೋಕ ಹುಡುಕಿದರೂ ದೇವಿಯೂ ಸಿಗಲಿಲ್ಲ...’, ‘ಏಳುಕೊಳ್ಳದ ಯಲ್ಲಮ್ಮ ಮಾಯಿಗಾತಿ ಜಗದಮ್ಮಾ ಉದೋ ಉಧೋ...’, ‘ಹುಟ್ಟಿದ ಬಂದೆ ಯಲ್ಲಮ್ಮನಾಗಿ ನಿನ್ನ ಮದವಿಯ ಮಾಡಿ ಕೊಟ್ಟಾರವ್ವಾ ಜಮದಗ್ನಿಗೆ, ಕೊಕಟನೂರ ಕೊರವಂಜಿ ಜಾತ್ರಿಯ...’, ‘ತಾಯಿ ರೇಣಕಿ ಆದಿಶಕ್ತಿ ಅವತಾರ ತೊಟ್ಟ ಬಂದಿ...’ ಇಂತಹ ಯಲ್ಲಮನ ಪವಾಡ ಕುರಿತಾದ ಪದಗಳು ವೀಕ್ಷಕರ ಮನಸೂರೆಗೊಂಡವು.

ಕಾರ್ಯಕ್ರಮದ ನಡುವೆ, ಅಮೆರಿಕದಲ್ಲಿ ನಡೆದ ‘ಅಕ್ಕ’ ಸಮ್ಮೇಳನಕ್ಕೆ ಹೋಗಿ ಬಂದಿದ್ದರ ಅನುಭವ ಹಂಚಿಕೊಂಡರು. ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರ ಸಹಕಾರ, ಅಮೆರಿಕದ ‘ಅಕ್ಕ’ ಸಮ್ಮೇಳನದ ರೂವಾರಿ ಅಮರನಾಥರನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು. ‘ಜೋಕಾಲಿಯಲ್ಲಿ ಕೂರುವ ಹೆಣ್ಮಕ್ಕಳೂ ನಾವು, ವಿಮಾನದಾಗ ಕುಂತು ಹಾರಾಡ್ಕೊಂಡು ಅಮೆರಿಕ ಮುಟ್ಟಿದ್ವಿ. ಆ ಸಮ್ಮೇಳನಕ್ಕೆ ಹೋಗಿದ್ದು ಹಬ್ಬಕ್ಕೆ ಹೋದಂಗಾಗಿತ್ರಿ’ ಎನ್ನುತ್ತಾ ವಿಮಾನಯಾನ, ಸಮ್ಮೇಳನದ ಸೊಬಗನ್ನು ಉತ್ತರ ಕರ್ನಾಟಕದ ಭಾಷೆಯಲ್ಲಿ ಸ್ವಾರಸ್ಯಕರವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿರಾಧಾಬಾಯಿ ಅವರೊಂದಿಗೆ ಲಕ್ಷ್ಮೀಬಾಯಿ ಮಾದರ, ಸೋನಾಬಾಯಿ ಮಾದರ, ವಿಮಲಾಬಾಯಿ ಮಾದರಭಾಗವಹಿಸಿದ್ದವರು. ಅಥಣಿಯ ತಮ್ಮ ಮನೆಯಿಂದಲೇ ಫೇಸ್‌ಬುಕ್‌ ಲೈವ್ ಕಾರ್ಯಕ್ರಮವನ್ನು ಪ್ರಸ್ತುಪಡಿಸಿದರು.

ರಾಧಾಭಾಯಿ ಅವರ ಹಾಡುಗಾರಿಕೆಯನ್ನು ವೀಕ್ಷಿಸಲು fb.com/prajavani.netಗೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT