ರಾಜೀವ್ ತಾರಾನಾಥ್‌ಗೆ ಅಭಿನಂದನಾ ಸಮಾರಂಭ

ಗುರುವಾರ , ಮಾರ್ಚ್ 21, 2019
24 °C
taranath- function

ರಾಜೀವ್ ತಾರಾನಾಥ್‌ಗೆ ಅಭಿನಂದನಾ ಸಮಾರಂಭ

Published:
Updated:
Prajavani

ಉಸ್ತಾದ್‌ ಅಲೀ ಅಕ್ಬರ್‌ ಖಾನ್‌ ಅವರ ಹಿರಿಯ ಶಿಷ್ಯ ರಾಜೀವ್ ತಾರಾನಾಥ್‌ ಭಾರತದ ಮೇರು ಸರೋದ್ ವಾದಕರಲ್ಲಿ ಒಬ್ಬರು.

ಕರ್ನಾಟಕ ಸರ್ಕಾರ ‘ಸಂಗೀತ ವಿದ್ವಾನ್ ಪ್ರಶಸ್ತಿ’ (2018) ಮತ್ತು ಭಾರತ ಸರ್ಕಾರ ‘ಪದ್ಮಶ್ರೀ’ (2019) ನೀಡಿ ಅವರನ್ನು ಗೌರವಿಸಿವೆ. ಈ ಸಂದರ್ಭದಲ್ಲಿ ರಾಜೀವ್ ತಾರಾನಾಥ್ ಅವರಿಗೆ ಸಾಹಿತಿ ಮತ್ತು ಕಲಾವಿದರು ಅಭಿನಂದನಾ ಸಮಾರಂಭವೊಂದನ್ನು ಮಾರ್ಚ್ 16ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದಾರೆ.

ಕಾರ್ಯಕ್ರಮದಲ್ಲಿ ಐ.ಎಂ. ವಿಠಲಮೂರ್ತಿ, ಉಸ್ತಾದ್ ಫಯಾಜ್ ಖಾನ್, ಸಿ. ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂದು ನಿಶಾಂತ್ ಪಣಿಕ್ಕರ್ ಹಿಂದೂಸ್ತಾನಿ ಸಂಗೀತ ಮತ್ತು ರಾಜೀವ್ ತಾರಾನಾಥ್ ಅವರಿಂದ ಸರೋದ್ ವಾದನ ಕಾರ್ಯಕ್ರಮವಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !