‘ಸುಗಮ ಸಂಗೀತ ಕ್ಷೇತ್ರಕ್ಕೆ ಈಗ ಏರುಗಾಲ’

7

‘ಸುಗಮ ಸಂಗೀತ ಕ್ಷೇತ್ರಕ್ಕೆ ಈಗ ಏರುಗಾಲ’

Published:
Updated:
Deccan Herald

ಸುಗಮ ಸಂಗೀತ ಕ್ಷೇತ್ರಕ್ಕೆ ಇದು ಏರುಗಾಲ ಎಂದು ಡಾ.ಎಚ್‌. ಎಸ್‌. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು. ‘ನೀ ರಘುರಾಮ’
ಧ್ವನಿಸಾಂದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು

ಈ ಧ್ವನಿಸಾಂದ್ರಿಕೆಯಲ್ಲಿ ತಮ್ಮ ಪತಿಗಾಗಿ ಕವನ ರಚಿಸಿ, ಧ್ವನಿಮುದ್ರಿಸಿದ ಆಶಾ ರಘು ಸಾಹಿತ್ಯ, ಪ್ರೇಮಲತಾ ದಿವಾಕರ್‌ ಸ್ವರ ಸಂಯೋಜನೆಯ ಈ ಧ್ವನಿಸಾಂದ್ರಿಕೆ ಕನ್ನಡದ ಭಾವಗೀತೆಗಳ ಕ್ಷೇತ್ರಕ್ಕೆ ಉತ್ತಮ ಸೇರ್ಪಡೆಯಾಗಿದೆ ಎಂದು ಕವಿ ಬಿ. ಆರ್‌. ಲಕ್ಷ್ಮಣ್‌ರಾವ್‌ ಹೇಳಿದರು. ರಾಗಾಂಜಲಿ ವಿದ್ಯಾರ್ಥಿಗಳ ಗಾಯನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಯಿತು. ಮೊದಲ ಪ್ರತಿಯನ್ನು ಡಾ. ಕಿಕ್ಕೇರಿ ಕೃಷ್ಣಮೂರ್ತಿ ಸ್ವೀಕರಿಸಿದರು.

ಲಹರಿ ವೇಲು, ಬಿ.ಕೆ. ಸುಮಿತ್ರ, ಶ್ರೀನಿವಾಸ್ ಜಿ. ಕಪ್ಪಣ್ಣ, ನಾ.ದಾಮೋದರ ಶೆಟ್ಟಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಾಯಕರಾದ ವೈ.ಕೆ. ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ಪಂಚಮ್ ಹಳಿಬಂಡಿ ಅವರು ಕನ್ನಡ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !