‘ತೀನ್ ಪ್ರಹಾರ್’ ಸಂಗೀತ ಕಛೇರಿ

ಮಂಗಳವಾರ, ಮಾರ್ಚ್ 19, 2019
20 °C

‘ತೀನ್ ಪ್ರಹಾರ್’ ಸಂಗೀತ ಕಛೇರಿ

Published:
Updated:
Prajavani

ಹೆಸರಾಂತ ಕಲಾವಿದರು ಅಪರೂಪದ ರಾಗಗಳನ್ನು ಪ್ರಸ್ತುತ ಪಡಿಸುವ ‘ತೀನ್ ಪ್ರಹಾರ್’ ಸಂಗೀತ ಕಛೇರಿ ಮಾ.17ರಂದು ಭಾನುವಾರ ಸಂಜೆ 6ಗಂಟೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ. ಬ್ಯಾನಿಯನ್ ಟ್ರೀ ಈವೆಂಟ್ಸ್ ಮತ್ತು ಬರ‍್ಲಾ ಸನ್ ಲೈಫ್ ಇನ್ಶೂರೆನ್ಸ್ ಕಾರ್ಯಕ್ರಮವನ್ನು ಆಯೋಜಿಸಿವೆ.  

ಹೆಸರಾಂತ ಗಾಯಕ ಹರಿಹರನ್ ಶಾಸ್ತ್ರೀಯ ಸಂಗೀತ, ಠುಮರಿ ಮತ್ತು ಗಜಲ್ ಗಾಯನ ಪ್ರಸ್ತುತಪಡಿಸಲಿದ್ದಾರೆ. ಹರಿಹರನ್ ಸಿನಿಮಾ ಹಿನ್ನೆಲೆ ಗಾಯಕರೂ ಹೌದು. ಹಿಂದಿ, ತಮಿಳು, ಮಲಯಾಳಂ, ಕನ್ನಡ, ಮರಾಠಿ, ಭೋಜಪುರಿ ಮತ್ತು ತೆಲುಗು ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

ಅಲ್ಲದೇ ವೈಭವ್ ರಮಣಿ (ವಯಲಿನ್), ಎಸ್. ಶಶಾಂಕ್ (ಕೊಳಲು), ದೇಬಶಿಶ್ ಭಟ್ಟಾಚರ‍್ಯ (ಸ್ಲೈಡ್ ಗಿಟಾರ್), ಕೋಹ್ ಶ್ರೀ. ಸ್ಯಾಕ್ಸ್ಮನ್ (ಸ್ಯಾಕ್ಸೋಫೋನ್) ಮತ್ತು ಅನುಬ್ರತಾ ಚರ‍್ಜಿ (ತಬಲಾ) ಇವರೆಲ್ಲಾ ಇದೇ ಮೊದಲ ಬಾರಿಗೆ ಒಟ್ಟಿಗೆ ಸೇರಿ ಸಂಗೀತದ ರಸದೌತಣ ಉಣಬಡಿಸಲಿದ್ದಾರೆ.

ಮಾಹಿತಿಗೆ: ಸಚಿನ್ ಮಾನೆ (9223231359)

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !