ಸೋಮವಾರ, ಅಕ್ಟೋಬರ್ 3, 2022
23 °C

‘ವಂದೇ ಮಾತರಂ’ಗೆ ಒಂದಾದ ಹಿರಿ–ಕಿರಿಯ ಕಂಠಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ವಂದೇ ಮಾತರಂ’ ದೇಶ ಭಕ್ತಿ ಗೀತೆಗೆ ನಾಡಿನ ಖ್ಯಾತ ಕಲಾವಿದರು ಧ್ವನಿಯಾಗಿ ಸಂಗೀತ ಆಲ್ಬಂನ್ನು ಹೊರತಂದಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ಲಹರಿ ಸಂಸ್ಥೆ ಈ ಗೀತೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. 

ನಾಡಿನ ಹಿರಿ–ಕಿರಿಯ ಕಲಾವಿದರು, ತಂತ್ರಜ್ಞರು ಸೇರಿ ಈ ಗಾಯನ– ವಿಡಿಯೋವನ್ನು ನಿರ್ಮಿಸಿದ್ದಾರೆ. ವಿಡಿಯೋಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 

ಬಂಕಿಮ್‌ ಚಂದ್ರ ಚಟರ್ಜಿ ಅವರ ಈ ಗೀತೆಗೆ ಸಂಗೀತ ಸಂಯೋಜಕ ಎನ್‌.ಎಸ್‌. ಪ್ರಸಾದ್‌ ರಾಗ ಸಂಯೋಜನೆ ಮಾಡಿದ್ದಾರೆ. ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ, ಇಂದು ವಿಶ್ವನಾಥ್, ರೋಹಿಣಿ ಮೋಹನ್, ದಿವ್ಯಾ ರಾಘವನ್, ಮಂಗಳರವಿ, ಸುನೀತಾ ಮುರಳಿ, ಪಂಚಮ ಹಳಿಬಂಡಿ, ಬಿ . ವಿ. ಪ್ರದೀಪ್, ಬಿ. ವಿ. ಪ್ರವೀಣ್, ಮತ್ತು ಗಣೇಶ್ ದೇಸಾಯಿ ಧ್ವನಿಯಾಗಿದ್ದಾರೆ. ಜೊತೆಗೆ ಪ್ರವೀಣ್‌ ಗೋಡ್ಖಿಂಡಿ, ಪ್ರವೀಣ್‌ ಡಿ. ರಾವ್‌ ಅವರೂ ಕೈಜೋಡಿಸಿದ್ದಾರೆ. 

ರತ್ನಮಾಲಾ ಪ್ರಕಾಶ್‌ ಅವರ ಪರಿಕಲ್ಪನೆಯಲ್ಲಿ ಈ ವಿಡಿಯೋ ಹಾಡು ಮೂಡಿ ಬಂದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು