ಸೋಮವಾರ, ನವೆಂಬರ್ 18, 2019
21 °C

ದಸರಾಕ್ಕೆ ರೇಷ್ಮೆ ಸೀರೆಗಳ ಪ್ರದರ್ಶನ

Published:
Updated:
Prajavani

ದಸರಾ ಹಬ್ಬದ ಪ್ರಯುಕ್ತ ರೇಷ್ಮೆ, ಹತ್ತಿ ಸೀರೆಗಳು, ಹ್ಯಾಂಡ್‌ಲೂಮ್‌ ಉತ್ಪನ್ನಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ‘ನ್ಯಾಷನಲ್‌ ಸಿಲ್ಕ್‌ ಎಕ್ಸ್‌ಪೋ’ವನ್ನು ಸಾರಕ್ಕಿ ಮೊದಲ ಹಂತದಲ್ಲಿನ ಸಿಂಧೂರ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆಯಲಿದೆ. 

ಈ ಪ್ರದರ್ಶನದಲ್ಲಿ ದೇಶದ ನಾನಾ ಭಾಗದ 80ಕ್ಕೂ ಹೆಚ್ಚು ಖ್ಯಾತ ವಸ್ತ್ರವಿನ್ಯಾಸಕರು, ಕೈಮಗ್ಗ ನೇಕಾರರು, ಕರಕುಶಲಕರ್ಮಿಗಳು ತಾವು ತಯಾರಿಸಿದ ರೇಷ್ಮೆ, ಹತ್ತಿ ಸೀರೆಗಳು, ಡ್ರೆಸ್‌ ಮೆಟೀರಿಯಲ್‌ಗಳು, ಫ್ಯಾಷನ್‌ ಜ್ಯುವೆಲ್ಲರಿಗಳನ್ನು ಮಾರಾಟ ಮಾಡಲಿದ್ದಾರೆ. ಒಂದೇ ಸೂರಿನಡಿಯಲ್ಲಿ ಬನಾರಸ್‌, ಜಾರ್ಜೆಟ್‌, ಕುರ್ತಾಗಳು, ಚೂಡಿದಾರ್‌ಗಳನ್ನು ಖರೀದಿ ಮಾಡಬಹುದು.

ಸ್ಥಳ: ಸಿಂಧೂರ್‌ ಕನ್ವೆನ್ಷನ್‌ ಸೆಂಟರ್‌, ಸಾರಕ್ಕಿ ಮೊದಲ ಹಂತ, ರಿಂಗ್‌ ರಸ್ತೆ, ಕನಕಪುರ ಮುಖ್ಯರಸ್ತೆ.
ಬುಧವಾರ ಬೆಳಿಗ್ಗೆ 11ರಿಂದ ರಾತ್ರಿ 9.

ಪ್ರತಿಕ್ರಿಯಿಸಿ (+)