ಚುನಾವಣಾ ಕಲಿಗಳ ಪತ್ನಿಯರ ಅಂತರಂಗ

ಸೋಮವಾರ, ಏಪ್ರಿಲ್ 22, 2019
33 °C

ಚುನಾವಣಾ ಕಲಿಗಳ ಪತ್ನಿಯರ ಅಂತರಂಗ

Published:
Updated:

ರಿಜ್ವಾನ್‌ ಎಲ್ಲರ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡವರು
‘ನಾನು ರಾಜಕಾರಣಿ, ನಿನಗೆ ಕೊಡಲು ಹೆಚ್ಚು ಸಮಯ ಇರುವುದಿಲ್ಲ ಓಕೆನಾ...‘ ಹೀಗೆಂದು ಮದುವೆಯ ಮಾತುಕತೆಯ ಸಮಯದಲ್ಲಿಯೇ ನನಗೆ ಕೇಳಿದ್ದರು ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್ ಅವರ ಪತ್ನಿ ನಜೀಹಾ ರಿಜ್ವಾನ್‌ ಹೇಳುತ್ತಾರೆ.

‘ನಮ್ಮ ಮದುವೆಯಾಗಿ ಆರು ವರ್ಷವಾಗಿದೆ. ಐದು ಮತ್ತು ಎರಡು ವರ್ಷಗಳ ಇಬ್ಬರು ಮಕ್ಕಳಿದ್ದಾರೆ. ಕಾಲೇಜು ದಿನಗಳಿಂದಲೂ ರಾಜಕೀಯ ನಂಟು ಹೊಂದಿದ್ದ ರಿಜ್ವಾನ್‌ ನಮ್ಮ ಮದುವೆಯಾಗುವಾಗಲೇ ಯುವ ಕಾಂಗ್ರೆಸ್‌ ಮುಖಂಡರಾಗಿದ್ದರು. ರಾಜಕಾರಣದ ಚಟುವಟಿಕೆಯಿಂದ ಬ್ಯುಸಿ ಇದ್ದರೂ ಮನೆಯಲ್ಲಿದ್ದಾಗ ಕುಟುಂಬದ ಜೊತೆ ಖುಷಿಯಾಗಿರುತ್ತಾರೆ. ಈಗ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಇರುವ ಕಾರಣ ಬೆಳಿಗ್ಗೆ ಮಕ್ಕಳು ಏಳೋಕೂ ಮುಂಚೆ ಹೊರಟುಬಿಡುತ್ತಾರೆ. ರಾತ್ರಿ ಅವರು ಬರುವಾಗ ಮಕ್ಕಳು ಮಲಗಿರುತ್ತಾರೆ. ಬಾಬಾ ಬೇಕು ಎಂದು ಮಕ್ಕಳು ಕೆಲವೊಮ್ಮೆ ಹಟ ಮಾಡುತ್ತಾರೆ. 

ರಾಜಕೀಯದಲ್ಲಿ ಆಸಕ್ತಿ ಇಲ್ಲದಿದ್ದರೂ ಅವರು ಸ್ಪರ್ಧಿಸುವಾಗಲೆಲ್ಲ ಕ್ಷೇತ್ರದಲ್ಲಿ ಮತ ಯಾಚನೆಗೆ ಹೋಗುತ್ತೇನೆ. ಈ ಬಾರಿಯೂ ಅವರ ಜೊತೆಗೆ ಹೋಗದೇ ಪ್ರತ್ಯೇಕವಾಗಿ ಗೆಳತಿ ಟಬೂ ಗುಂಡೂರಾವ್‌, ಕೆ.ಜೆ. ಜಾರ್ಜ್‌ ಅವರ ಪತ್ನಿ ಜೊತೆ ಕೆಲವು ವಾರ್ಡ್‌ಗಳಲ್ಲಿ ಮತ ಯಾಚನೆಗೆ ಹೋಗುತ್ತಿದ್ದೇನೆ. ರಿಜ್ವಾನ್‌ ಅವರು ಎಲ್ಲರ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡವರು. ಹಾಗಾಗಿ ಅವರ ಪತ್ನಿ ಎಂದು ಗುರುತಿಸುವ ಜನ ಪ್ರೀತಿಯಿಂದ ಮಾತನಾಡಿಸುತ್ತಾರೆ’ ಎನ್ನುತ್ತಾರೆ ನಜೀಹಾ.


ಮಕ್ಕಳ ಜೊತೆ ನಜೀಹಾ ರಿಜ್ವಾನ್‌​

ಪ್ರಕಾಶ್‌ ಉತ್ತಮ ವ್ಯಕ್ತಿ
‘ಅಪರಾಧಗಳಲ್ಲಿ ಗುರುತಿಸಿಕೊಂಡಿರುವ ಸಮಾಜಘಾತುಕ ವ್ಯಕ್ತಿಗಳು ರಾಜಕೀಯಕ್ಕೆ ಬರುವುದನ್ನು ವಿರೋಧಿಸದ ಸಮಾಜ, ಸಿನಿಮಾ ನಟನೊಬ್ಬ ರಾಜಕೀಯಕ್ಕೆ ಬರುವುದನ್ನು ಸಹಿಸುತ್ತಿಲ್ಲ’ ಎಂದು ಬೇಸರದಿಂದಲೇ ಮಾತು ಶುರು ಮಾಡಿದವರು ಪ್ರಕಾಶ್‌ ರಾಜ್‌ ಪತ್ನಿ ಪೋನಿ ವರ್ಮಾ.

‘ಪ್ರಕಾಶ್‌ ರಾಜ್‌ ಅನ್ಯಾಯದ ವಿರುದ್ಧ ದನಿ ಎತ್ತುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವ ಸಂದರ್ಭದಲ್ಲೆಲ್ಲ ಅವರು ಮಾತನಾಡಿದ್ದಾರೆ. ಬೇರೆ ಕಲಾವಿದರಂತೆ ಸುಮ್ಮನೆ ಕುಳಿತಿಲ್ಲ. ಅನೇಕ ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ, ಹೋರಾಟಗಳಲ್ಲಿ ತೊಡಗಿಕೊಂಡವರು. ಸಿನಿಮಾದಲ್ಲಿಯೂ ಒಳ್ಳೆಯ ಹೆಸರು ಮಾಡಿದ್ದಾರೆ. ಅವರನ್ನು ಇಷ್ಟಪಡುವ ಬಹಳ ಮಂದಿ ಇದ್ದಾರೆ. ಪ್ರಕಾಶ್‌ ಉತ್ತಮ ವ್ಯಕ್ತಿ. ಅವರಂಥ ನಾಯಕರು ರಾಜಕೀಯಕ್ಕೆ ಬರಬೇಕು. ಅವರೊಂದಿಗೆ ನಮ್ಮ ಇಡೀ ಕುಟುಂಬ ಬೆನ್ನೆಲುಬಾಗಿ ನಿಂತಿದೆ.  ನಾನು, ಮಗಳು ಪೂಜಾ, ಅಮ್ಮ ಎಲ್ಲರೂ ಇಲ್ಲೇ ಇದ್ದೇವೆ. ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದಾಗ ಉತ್ತಮ ಸ್ಪಂದನೆ ಸಿಗುತ್ತಿದೆ’ ಎನ್ನುತ್ತಾರೆ ಪೋನಿ ವರ್ಮಾ.


ಪೋನಿ ವರ್ಮಾ

ಆರು ಎಲೆಕ್ಷನ್‌ ಕಂಡಿದ್ದೇವೆ
‘ನಮ್ಮ ಮದುವೆಯಾಗುವಾಗ ಇವರು ಉದ್ಯಮಿ ಆಗಿದ್ರು. ನಂತರ ರಾಜಕಾರಣಿಯಾದವರು. ನಾಲ್ಕು ಲೋಕಸಭಾ ಚುನಾವಣೆ, ಎರಡು ವಿಧಾನಸಭಾ ಚುನಾವಣೆ ಎದುರಿಸಿದ್ದೇವೆ. ಆದರೆ, ನನಗೆ ರಾಜಕಾರಣ ಇಷ್ಟ ಇಲ್ಲ. ನಾನು ಯಾವುದಕ್ಕೂ ತಲೆ ಹಾಕಲ್ಲ ’ ಎನ್ನುತ್ತಾರೆ ಪಿ.ಸಿ. ಮೋಹನ್‌ ಅವರ ಪತ್ನಿ ಶೈಲಾ ಮೋಹನ್‌.

‘ನನಗೆ ರಾಜಕಾರಣ ಇಷ್ಟ ಇಲ್ಲ. ಸಾರ್ವಜನಿಕ ಸಭೆಗಳಿಗೂ ಹೋಗಲ್ಲ. ನನ್ನ ಸೀಮಿತ ವಲಯದಲ್ಲಿ ಪತಿಯ ಪರ ಪ್ರಚಾರ ಮಾಡುತ್ತೇನಷ್ಟೇ. ನೀವ್ಯಾಕೆ ಮತ ಕೇಳುತ್ತೀರಿ? ನಾವೇ ಮತ ಹಾಕುತ್ತೇವೆ ಎಂದು ಕ್ಷೇತ್ರದ ಜನ ಹೇಳ್ತಾರೆ. ಇವರನ್ನು ಕಂಡರೆ ಎಲ್ಲರಿಗೂ ಪ್ರೀತಿ’ ಎನ್ನುತ್ತಾರೆ.


ಶೈಲಾ ಮೋಹನ್‌

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !