ಹೊಸ ಮಾದರಿ ಕಥನ

ಬುಧವಾರ, ಏಪ್ರಿಲ್ 24, 2019
27 °C
ಮೊದಲ ಓದು

ಹೊಸ ಮಾದರಿ ಕಥನ

Published:
Updated:
Prajavani

CKಜೇಡನ ಆತ್ಮಚರಿತ್ರೆ

ಲೇ: ಮಂಜುನಾಥ ವಿ ಎಂ
ಪು: 176
₹: 195
ಪ್ರ: ಆಕೃತಿ ಪುಸ್ತಕ, ಬೆಂಗಳೂರು 

‘ckಜೇಡನ ಆತ್ಮಚರಿತ್ರೆ’ಯಲ್ಲಿ ಮಾಮೂಲಿ ಕಾದಂಬರಿಗಳ ರೀತಿ ಅಲ್ಲದೆ ವಿಶಿಷ್ಟ ಗದ್ಯಶೈಲಿಯಿದೆ. ರೂಪಕಗಳ ಸರಮಾಲೆಗಳನ್ನು ಬರಹದಲ್ಲಿ ಸರಾಗವಾಗಿ ಪೋಣಿಸಲಾಗಿದೆ. ದಲಿತಲೋಕವನ್ನು ಪರಿಚಯಿಸುವ ಈ ಹಿಂದಿನ ಪರಿಕರಗಳನ್ನು ಬಿಟ್ಟು ಇಲ್ಲಿ ಹೊಸದೇ ಮಾದರಿ ಕಟ್ಟಿಕೊಡಲಾಗಿದೆ. 

ಒಂದೇ ಗುಕ್ಕಿಗೆ ಪುಸ್ತಕ ಓದಿ ಮುಗಿಸುವವರು ಸಹ ಕೊಂಚ ತಡೆದು ಓದಬೇಕಾಗುತ್ತದೆ. ಏಕೆಂದರೆ ಅಲ್ಲಲ್ಲಿ ಓದುವುದನ್ನು ನಿಲ್ಲಿಸಿ ಪುನರಾವರ್ತನೆ ಮಾಡಿದರಷ್ಟೆ ಬರಹದ ವಿಶಿಷ್ಟ ಶೈಲಿ ಹಾಗೂ ಓದಿನ ವಿಷಯವನ್ನು ಒಟ್ಟಾಗಿ ಮನಸೊಳಗೆ ಇಳಿಸಿಕೊಳ್ಳಬಹುದು. ರಕ್ಷಾಕವಚದ ವಿನ್ಯಾಸ ಲೇಖಕರದ್ದೇ ಆಗಿದ್ದು, ಇದು ಸಹ ಕಾದಂಬರಿಯ ಚಿತ್ರಣಕ್ಕೆ ಮತ್ತಷ್ಟು ಮೌಲ್ಯ ಸೇರಿಸುವಂತಿದೆ. 

ಮುನ್ನುಡಿ, ಬೆನ್ನುಡಿಗಳ ಕವಚವಿಲ್ಲದ ಪುಸ್ತಕದ ಹಿಂಬದಿಯಲ್ಲಿ ಫ್ರೆಂಚ್ ಲೇಖಕ ಮಿಲನ್ ಕಂಡೇರ ಅವರ All great novels, all true novels are bisexual ಎನ್ನುವ ಸಾಲಿನ ಉಲ್ಲೇಖವಿದೆ. ಕಾದಂಬರಿಯಂತೆ ಈ ಸಾಲು ಸಹ ಚಿಂತನೆಗೆ ಹಚ್ಚುತ್ತದೆ ಮತ್ತು ಓದು ವಿಸ್ತಾರಗೊಳಿಸಿಕೊಳ್ಳಲು ಪ್ರೇರೇಪಿಸುವಷ್ಟು ಸಶಕ್ತವಾಗಿದೆ. ವಿಭಿನ್ನವಾಗಿರುವ ಪುಸ್ತಕದ ಶೀರ್ಷಿಕೆ ಮೂಡಿಸುವ ಕುತೂಹಲ ತಣಿಸಲು ಕೂಡ ಇದನ್ನು ಓದಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !