ಚಿತ್ರಕಥೆ: ನೀರಾಟದ ನೆನೆಪು

7

ಚಿತ್ರಕಥೆ: ನೀರಾಟದ ನೆನೆಪು

Published:
Updated:
Deccan Herald

ಬೇಸಿಗೆ ರಜದಲ್ಲಿ ಧಗೆಯಲ್ಲಿ ಕೆರೆಗೆ ಜಿಗಿದು ನೀರಾಟ ಆಡಿದ ನೆನೆಪು ಬಹುತೇಕ ಎಲ್ಲರ ಬಾಲ್ಯದ ಭಾಗವಾಗಿರುತ್ತದೆ. ತಣ್ಣನೆ ನೀರು ಮೈಗೆ ಸೋಕಿದಾಗ ಹುಟ್ಟುವ ನಡುಕ, ಮೂಗು ಮುಚ್ಚಿ ಮುಳುಗೆದ್ದಾಗ ಹುಟ್ಟುವ ಪುಲಕ ಎಲ್ಲವನ್ನೂ ಮಾತಿನಲ್ಲಿ ಬಣ್ಣಿಸಲು ಸಾಧ್ಯವೇ? ನಮ್ಮದೇ ಬದುಕಿನ ಅಂಥ ಹಲವು ನೆನಪುಗಳನ್ನು ಇದೊಂದು ಚಿತ್ರವಿದು.

ನಾನು ಈ ಚಿತ್ರ ತೆಗೆದಿದ್ದು ಕುಮಟೆಯ ಬಳಿಯ ಒಂದು ಊರಿನಲ್ಲಿ. ಪ್ರಜ್ವಲ್, ಲೋಕೇಶ್ , ಸುಬ್ರಮಣ್ಯ ಮತ್ತು ರೋಹಿತ್ ನೀರಿನಲ್ಲಿ ಕುಣಿಯುತ್ತ ಏಳುತ್ತಾ ನಿರರ್ಗಳವಾಗಿ ಪಾಪ್ ಸೂಪರ್ ಹಿಟ್ ಹಾಡಾದ despacito ಹಾಡುವುದನ್ನು ಕೇಳಿದಾಗ ತುಂಬಾ ಆಶ್ಚರ್ಯವೇ ಆಯಿತು.

ಕೆಂದಗಾಲಜಡ್ಡಿಯ ಸುಂದರ ಪರಿಸರದ ನಡುವೆ ಹರಿಯುತ್ತಿದ್ದ ಮಳೆಯಿಂದಾದ ನೀರಿನ ಸಣ್ಣ ಹಳ್ಳವೊಂದರಲ್ಲಿ ರಿಕ್ಷಾ ತೊಳೆಯಲೆಂದು ಬಂದಿದ್ದ ಅಣ್ಣಂದಿರ ಜೊತೆಗೆ ಟೈಮ್ ಪಾಸ್ ಮಾಡಲು ಬಂದ ಹುಡುಗರಿವರು. ಸ್ವಲ್ಪ ಹೊತ್ತು ನೀರಾಟ, ಈಜಾಟ ಆಡಿ, ಅಲ್ಲಿ ಓಡಾಡಿಕೊಂಡಿದ್ದ ಸಣ್ಣ ಸಣ್ಣ ಮೀನುಗಳನ್ನು ಹಿಡಿದು ಬಾಟಲಿಗಳಲ್ಲಿ ಹಾಕಿ ಮನೆಗೆ ಕೊಂಡೊಯ್ಯುವ ಪ್ಲಾನ್ ಅವರದ್ದು.

ಈ ಫೋಟೊ ತೆಗೆಯುವುದು ಸ್ವಲ್ಪ ಕಷ್ಟದ ಕೆಲಸ. ನನ್ನ ಕ್ಯಾನನ್ 6D ಕ್ಯಾಮೆರಾ ಮತ್ತು ನನ್ನ ಪ್ರೀತಿಯ 40mm ಲೆನ್ಸ್‌ನ ಮ್ಯಾಜಿಕ್ ಎಂದೇ ಹೇಳಬಹುದು! ನೀರಿನ ಎರಚುವಿಕೆಯನ್ನು ಅವಕಾಶದಲ್ಲಿ ಹಿಡಿದು ತೋರಿಸಲು ಅತಿ ಹೆಚ್ಚಿನ ಶಟರ್ ಸ್ಪೀಡ್ ಬೇಕು. ಈ ಹುಡುಗ ನೀರಿನಲ್ಲಿ ಬೀಳುತ್ತಿರುವ ರೀತಿಯನ್ನು ಗಮನಿಸಿ ನಾನು ಮೊದಲೇ 1/4000 ಶಟರ್ ಸ್ಪೀಡ್ ಬರುವ ಹಾಗೆ ಕ್ಯಾಮೆರಾದ ಸೆಟ್ಟಿಂಗ್ಸ್ ಇಟ್ಟಿದ್ದೆ. ಮತ್ತೊಮ್ಮೆ ಅವನು ಬೀಳುವಾಗ ಕೂಡಲೇ ಬರ್ಸ್ಟ್ ಮೋಡ್‌ನಲ್ಲಿ (ಅಂದರೆ ನಿರಂತರವಾಗಿ ಕ್ಯಾಮೆರಾ ಕ್ಲಿಕ್ಕಿಸುವ ರೀತಿ) ಕ್ಲಿಕ್ಕಿಸಿದೆ. ಆಗ ಬಂದ ನಾಲ್ಕು ಛಾಯಾಚಿತ್ರಗಳಲ್ಲಿ ಇದು ನನಗೆ ಅತಿ ಇಷ್ಟವಾದುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !