ಜೀವನ್ಮುಖಿ

7

ಜೀವನ್ಮುಖಿ

Published:
Updated:

ಸುಖದ ನದಿ ಹರಿಯುತ್ತಿದೆ

ದುಃಖದ ದಡಗಳ ನಡುವೆ

ನೆನ್ನೆಯಿಂದ ನಾಳೆಗೆ ಜುಳು ಜುಳು..

 

ನಾಳೆ ಅರಿಯದ ಈ ಬಾಳು

ಹರಿವ ತೊರೆಯಲಿ ಮೊಗೆದ

ಬೊಗಸೆಯೊಳಗಿನ ನೀರು

ತುಟಿ ಇಟ್ಟು ಹೀರು

ಹನಿ ಹನಿಯಾಗಿ ಸೋರಿ ಹೋಗುವಾ ಮುನ್ನ..

 

ಕಾಲದ ತೊರೆ ಹರಿಯುತ್ತಿದೆ

ಹಗಲು ರಾತ್ರಿ ದಡಗಳ ನಡುವೆ

ಆದಿಯಿಂದ ಅನಂತದೆಡೆಗೆ...

 

ಯಾರ ಅಣತಿಗೂ ಕಾಯದ ಸಮಯ

ಅನಿತ್ಯ ಚಲನೆಯ ನಿಯಮ

ಕ್ಷಣ ಕ್ಷಣವನ್ನೂ ಬದುಕಿಬಿಡು

ಜೀವನ್ಮುಖಿಯಾಗಿ

ಹರಿದು ಸರಿದು ಹೋಗುವಾ ಮುನ್ನ...

 

ಹರಿದು ಕೂಡಿ ಕಡಲಾಗುವ ನದಿಗೆ

ನೂರಾರು ಆಸೆಯ ಒಡ್ಡು

ಸಿಡಿಮದ್ದು ಇಡು

ನಿಂತ ನೀರು ಮಲಿನವಾಗುವಾ ಮುನ್ನ

ನದಿ ಬೆತ್ತಲಾದರೂ

ತನ್ನಾಳ ಹರವು ತೋರದು

ಬಾಗಿ ಬಳುಕಿ ಚುಂಬಿಸುವ ಸೆಳವಿಗೆ

ಸವೆವ ದಡ ನಿತ್ಯ ನಿರಂತರ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry