ಮೊಬೈಲ್ ಮಾರಿ!

7

ಮೊಬೈಲ್ ಮಾರಿ!

Published:
Updated:
Deccan Herald

ಮೊಬೈಲ್ ಫೋನದು ಎದುರಲಿ ಕಂಡರೆ
ಮನದಲಿ ಆಸೆಯು ಮೂಡುವುದು

ಮನವನು ಕೆಡಿಸುವ ಮಾಯಾ ಮೋಹಿನಿ
ನನಗೂ ಬೇಕೆಂದೆನಿಸುವುದು

ಗೂಗಲ್ ಫೇಸ್‌ಬುಕ್ ವಾಟ್ಸ್‌ಆ್ಯಪ್ ಎನ್ನುತ
ಮುಗಿಯದ ಆಸೆಯು ಚಿಗುರುವುದು

ಜಗವನು ಮರೆಸುತ ಮನವನು ಗೆಲ್ಲುತ
ನಗೆಯನು ಬೀರುತ ಹೊಳೆಯುವುದು

ನೋಡಿದ ಕೂಡಲೆ ಆಟವನಾಡಲು
ಬೇಡಿಕೆ ಬರುವುದು ಮನದಲ್ಲಿ

ನೋಡುತ ನೋಡುತ ಆಡುತಲಿರಲು
ಮೋಡಿ ಮಾಡುವುದು ಕ್ಷಣದಲ್ಲಿ

ಓದುಬರಹಗಳು ದೂರ ಉಳಿಯುವವು
ಹಾದಿ ತಪ್ಪುವುದು ದಿನಚರಿಯು

ಸಾಧನೆ ಮಾಡುವ ಗುರಿ ಅಳಿಯುವುದು
ವೇದನೆ ಮನಸಿಗೆ ಅನುದಿನವು

ಮೊಬೈಲ್ ಮಾರಿಯೆ ದೂರಕೆ ತೊಲಗು
ಮೈಮನಸುಗಳನು ಕೆಡಿಸದಿರು

ಕಲಿಯುವ ಆಸೆಯ ಕದಿಯುವ ಕಣ್ಮಣಿ
ಬಯಕೆಯ ಮನದಲಿ ತರಿಸದಿರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !