ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನೇಶ ನವಲಹಳ್ಳಿ ಬರೆದ ಕವಿತೆ: ಯುದ್ಧವಾದಾಗೊಮ್ಮೆ ಬುದ್ಧ ನಿಜವಾಗಿ ಸಾಯಬಹುದು

Last Updated 5 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಇಳೆ ಪಿಸುಗುಡುತ್ತಿರುವಂತೆ
ಇಲಿ ಶ್ವಾನಗಳು ತಳಮಳಿಸುತ್ತವೆ
ಇಲ್ಲಿಗೇನಾದರೂ ಇದಿ ಬಂದೀತೆಂದು
ಇದ್ದಕ್ಕಿದ್ದಂತೆ ಬಾಯ್ದೆರೆದು ನುಂಗಿ ನೀರು ಕುಡಿಯಬಹುದು ಆ ಬೇಗುದಿ
ಇದ್ದಲ್ಲಿಯೇ ಎದೆ ವೇಗ ಹೆಚ್ಚುತ್ತಿದೆ

ದೂರದ ದೇಶದ ರೋಗ
ನನ್ನ ಮನೆಯ ಹೊಸ್ತಿಲು ದಾಟಿ
ನನ್ನ ಮಾತಾಡಿಸಿ
ನನ್ನವರನ್ನೂ ಹೊತ್ತು ಹೋಗಿದೆ ಅದು ಗೊತ್ತೆ ಇದೆ

ಇನ್ನೇನು ಮನೆಯಿಂದ
ಆಚೆ ಬರಬೇಕೆಂದುಕೊಂಡರೆ
ಮತ್ತೆ ನಮ್ಮದೇ ಊರ ಗಲ್ಲಿ ಗಲ್ಲಿಯಲ್ಲೂ
ಜಾತಿ ಭೂತ ಹೊಕ್ಕು ರಕ್ತ ಬೇಡುತ್ತಿದೆ
ಸಮತೆಗಾಗಿ ಸವೆದು ಅಮರವಾದ
ಬೀದಿ ಬದಿಯ ವೃತ್ತದಲ್ಲಿರುವ ಶಿಲ್ಪಗಳೂ ಕಣ್ಣೀರಿಡುತ್ತಿವೆ
ದಾಳಿಗೊಳಗಾಗಿವೆ
ರಾಜರ ಬಂಡವಾಳಿಗರ ಕಲಹಿಗಳ ಸ್ವಹಿತದ ಕುಮ್ಮಕ್ಕಿಗೆ

ದೂರದಲ್ಲಿ
ನಮ್ಮ ಮನೆಯ ದೂರದರ್ಶನದಲ್ಲೂ
ಬೆಂಕಿ ಹೊತ್ತಿ ಉರಿಯುತ್ತಿದೆ
ಅದರ ಮೇಲೆ ಬಲಾಬಲದ ಕುದಿವ ಬಾಂಡೆ
ಅದರಲ್ಲಿ ಬೇಯುತ್ತಿರುವವರು ನಮ್ಮಂತ ಸಾಮಾನ್ಯರೇ
ನೆರೆ ಮನೆಯ ಬೆಂಕಿಗೇನು ಕರುಣೆಯೇ
ಯುದ್ಧವಾದಾಗೊಮ್ಮೆ ಬುದ್ಧ ನಿಜವಾಗಿ ಸಾಯಬಹುದು
ಶಾಂತಿ ಅಮರತ್ವಗಳಿಲ್ಲಾ
ಅರಣ್ಯನ್ಯಾಯದಡಿಯಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT