ಶನಿವಾರ, ಆಗಸ್ಟ್ 17, 2019
24 °C

ಸಂತೆಯ ನೆನಪು

Published:
Updated:
Prajavani

ಅಪ್ಪನು ತಂದ ಸಂತೆಯೊಳಿಂದ

ಕರಿಬಿಳಿ ಬಣ್ಣದ ಗೆರೆ ಅಂಗಿ

ಜೊತೆಗೆ ತಂದ ಮಂಡಕ್ಕಿ ಕಾರ

ಬದನೆ, ಅವರೆ, ಮೂಲಂಗಿ

 

ಉಬ್ಬಿದ ಎದೆಯಲಿ ಕರೆದ ತನ್ನಯ

ಕುಳ್ಳನೆ ಬೆಳ್ಳನೆ ಮಡದಿಯನು

ನಡುಮನೆಯಲ್ಲಿ ಮೆಲ್ಲನೆ ಸುರಿದ

ಬಗೆ ಬಗೆಯ ತರಕಾರಿಯನು

 

ದುಂಡನೆ ದೇಹಿಗಳೆಲ್ಲ ಹೋದವು

ಮೂಲೆಯ ದಾರಿಯ ಬಿಲವಿಡಿದು

ಅಮ್ಮ ಅರೆರೆರೆ ಎನ್ನುಲು ಕ್ಷಣದಿ

ಹಿಡಿದೆ ಓಡುತ ಎಲ್ಲವನು

 

ಮೂಗಲಿ ಸಿಂಬಳ ಸೊರುತಲಿತ್ತು

ಅಯ್ಯೋ ಚಡ್ಡಿ ಉದುರುತಲಿತ್ತು

ಮಂಡಕ್ಕಿ ಕಾರ ಮಿನುಗುತಲಿತ್ತು

ಗೆಳೆಯನ ಕೈಯಿ ಕರೆಯುತಲಿತ್ತು

 

ಅಮ್ಮನು ಕೊಟ್ಟ ಮಂಡಕ್ಕಿ ತಿಂದು

ಕರೆಯುವ ಕೈಗೆ ಒಂದಿಡಿ ಎಂದು

ಆಡಲು ಓಡುವ ಜೀವನವಿತ್ತು

ಈಗದು ನೆನಪಲಿ ಮಿನುಗುತಲಿತ್ತು

Post Comments (+)