ಸೋಮವಾರ, ಮಾರ್ಚ್ 30, 2020
19 °C

ಸೊಳ್ಳೆರಾಯ

ಆಶಾ ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಬಡವ ಬಲ್ಲಿದನೆನ್ನದೆ

ಹಿರಿಯ ಕಿರಿಯರ ತಾಳೆ ಹಾಕದೆ

ತಾರತಮ್ಯವನ್ನೆಲ್ಲೂ ಮಾಡದೆ

ಗಡಿ - ಬೇಲಿಗಳಲ್ಲೆಲ್ಲೂ ನಿಲ್ಲದೆ

ಯಾರ ಆಮಿಷಕ್ಕೂ ಒಳಪಡದೆ

 

ಪ್ರತಿ ಮನೆಯಲ್ಲೂ ಅವತರಿಸಿ

ತನ್ನ ಸಾಮ್ರಾಜ್ಯವನ್ನು ಬಲಪಡಿಸಿ

ದಿನೇ ದಿನೇ ಒಂದು ನೂರಾಗಿ... ಸಾವಿರವಾಗಿ

ಸತತವಾಗಿ ಹಗಲು-ಇರುಳನ್ನದೆ ದಾಳಿ ಮಾಡುವೆ

 

ಬತ್ತಿಗಳೆಲ್ಲ ಬತ್ತಿ ಹೋದವು

ರಸಹೀರುವ ಯಂತ್ರಗಳೆಲ್ಲ ಬಿದ್ದುಹೋದವು

ತರಾವರಿ ಔಷಧಿ ತುಂಬಿದ ಕಾಗದಗಳೆಲ್ಲ ಸುಟ್ಟುಹೋದವು

ಜಿಲೇಬಿಯ ಹೋಲುವ ಕಡ್ಡಿಗಳು ಬೂದಿಯಾದವು

 

ಕೊನೆಗೊಂದು ‘ಬ್ಯಾಟು’ ಮನೆಯ ತುಂಬಿ

ಚಟ-ಪಟ ಎಂದಾಗ ಎಲ್ಲರ ಮನ ತುಂಬಿ

ಮನೆ ಮಕ್ಕಳೆಲ್ಲ ಮುಯ್ಯಿ ತೀರಿಸಿಕೊಂಡಾಯಿತು

ಸೊಳ್ಳೆರಾಯ... ಸರಿಯೇ ನಿನ್ನೀ ಕಾರ್ಯ?!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)