ಬುಧವಾರ, ಸೆಪ್ಟೆಂಬರ್ 29, 2021
20 °C

ರಂಗಸ್ವಾಮಿ ಮಾರ್ಲಬಂಡಿ ಅವರ ಕವಿತೆ: ಅದನ್ನು ಮೀರಿದಿದೇನೊ

ರಂಗಸ್ವಾಮಿ ಮಾರ್ಲಬಂಡಿ Updated:

ಅಕ್ಷರ ಗಾತ್ರ : | |

Prajavani

ಒಣಗಿದ ನೆಲದಿ
ಗುಬ್ಬಕ್ಕಿ ಹಾರುತಿತ್ತು
ಕುಂತು ಕೂಡದೆ
ರೆಕ್ಕೆಯಲಿ ಹರಸುತ್ತಾ
ಸ್ವಾತಂತ್ರ್ಯದ ಕುರುಹಾಗಿ
ಜಗವ ನೋಡುತಿತ್ತು.

ವಿಷಾದದ ಧ್ವನಿಯಲ್ಲಿ
ವಿಷಯಾಂತರ ಮಾಡುತ್ತಾ
ವಿಶ್ವವೇ ಬೇಡವಾಗಿತ್ತು..!

ಪರಿಮಳ ಸೂಸುವಿಕೆ ಇಲ್ಲದೆ
ಓ ಹಂಬಲವೇ ಬಂಧಿಸಿದೇಗೆ
ಕೇವಲ ಕಣ್‌ ಪರದೆಯಲಿ
ದೇಹವೇ ಭಾರವಾದ ಕ್ಷಣದಲಿ
ಭಾವವೂ ತಣ್ಣಗಾಗಿಸಿ
ನಿಷ್ಟುರದ ಆಸೆಗೆ
ನಿಶ್ಚಯದ ಕನಸು ಕಟ್ಟಿಸಿದೆ
ಇದು ಸ್ವಾರ್ಥ ಅಲ್ಲ 
ಆಸೆಯೂ ಅಲ್ಲ
ಆಸೆ ಆಕಾಂಕ್ಷೆ ಮೀರಿದ ಪ್ರೀತಿ...!
ಅದುವೂ ಅಲ್ಲ
ಅದನ್ನು ಮೀರಿದಿದೇನೊ
ಅದನ್ನು ಮೀರಿದಿದೇನೊ...!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.