ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯನ್ಸ್‌ ಸೇವಾ ಸಪ್ತಾಹ

Last Updated 8 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಹನುಮಂತನಗರದ ಲಯನ್ಸ್‌ ಕ್ಲಬ್‌ನ ಸದಸ್ಯರು ಅಕ್ಟೋಬರ್‌ ಮೊದಲ ವಾರ ವಿವಿಧ ಸೇವಾ ಕಾರ್ಯಗಳನ್ನು ಕೈಗೊಂಡು ಸೇವಾ ಸಪ್ತಾಹ ಆಚರಿಸಿದ್ದಾರೆ.

ಸಸಿ ನೆಡುವ ಕಾರ್ಯಕ್ರಮದಿಂದ ಆರಂಭವಾದ ಸೇವಾ ಸಪ್ತಾಹದಲ್ಲಿ, ಉಚಿತ ನೇತ್ರ ತಪಾಸಣೆ, ಅನಾಥಾಶ್ರಮಗಳಿಗೆ ಉಪಾಹಾರ, ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ, ವೃದ್ಧಾಶ್ರಮಗಳಲ್ಲಿ ಸಂಗೀತ ಕಾರ್ಯಕ್ರಮಗಳು ನಡೆದಿವೆ.

ಗಾಂಧಿ ಜಯಂತಿ ದಿನದಂದು ಕೊಂಡೇನಹಳ್ಳಿ ಸುತ್ತಮುತ್ತ ನೂರಾರು ಗಿಡಗಳನ್ನು ನೆಟ್ಟು ಮಹಾತ್ಮ ಗಾಂಧೀಜಿಯನ್ನು ಸ್ಮರಿಸುವ ಮೂಲಕ ಸಪ್ತಾಹಕ್ಕೆ ಲಯನ್ಸ್‌ ಸದಸ್ಯರು ಚಾಲನೆ ನೀಡಿದರು. ಸುಂಕೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 4ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ (110 ಮಕ್ಕಳು) ಹಾಗೂ ಶಿಕ್ಷಕರಿಗೆ ಉಚಿತ ನೇತ್ರ ತಪಾಸಣೆಯನ್ನು ಲಯ್ಸನ್ಸ್‌ ಸಂಸ್ಥೆ ನೆರವೇರಿಸಿದೆ. ಈ ವೇಳೆ ನಾಲ್ಕು ಮಕ್ಕಳಿಗೆ ಕನ್ನಡಕವನ್ನೂ ಒದಗಿಸಿದೆ.

ಬಸವೇಶ್ವರ ನಗರದಲ್ಲಿರುವ ಬಾಂಧವ್ಯ ಮತ್ತು ಶಾರದಾ ಅನಾಥಾಶ್ರಮಗಳಲ್ಲಿ ಬೆಳಿಗ್ಗೆಯ ಉಪಾಹಾರವನ್ನು ನೀಡಿ, ಅಲ್ಲಿನ ಮಕ್ಕಳ ಜತೆ ಲಯನ್ಸ್‌ ಸದಸ್ಯರು ಕಾಲ ಕಳೆದಿದ್ದಾರೆ.

ಅಲ್ಲದೆ ಗಾಂಧಿ ಬಜಾರ್‌ನ ಸಾಯಿ ವೃದ್ಧಾಶ್ರಮದಲ್ಲಿನ ಹಿರಿಯ ನಾಗರಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ, ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಹಿರಿಯ ನಾಗರಿಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಈ ಸದಸ್ಯರು ಮಾಡಿದ್ದಾರೆ.

ಲಯನ್ಸ್‌ ಸದಸ್ಯರಾದ ಡಾ. ಜಿ. ಮೋಹನ್‌, ರುದ್ರೇಶ್‌, ಅರುಣಾ ಕುಮಾರ್‌ ಶೆಟ್ಟಿ, ಕೃಷ್ಣಾನಂದ ಕುಂಬ್ಳೆ, ಸುಮಲತಾ ವಿಶ್ವನಾಥನ್‌ ಮೊದಲಾದವರು ಸಪ್ತಾಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT