ಸಂಭ್ರಮವಿತ್ತು, ಆಡಂಬರವಿರಲಿಲ್ಲ

7

ಸಂಭ್ರಮವಿತ್ತು, ಆಡಂಬರವಿರಲಿಲ್ಲ

Published:
Updated:
Deccan Herald

ನನ್ನ ಮದುವೆಯ ಸನ್ನಿವೇಶ ಇಂದಿಗೂ ನನ್ನ ಮನದಲ್ಲಿ ಹಚ್ಚಹಸಿರಾಗಿದೆ. ಆ ಮದುವೆಯಲ್ಲಿ ಸಂಭ್ರಮವಿತ್ತು ಆಡಂಬರವಿರಲಿಲ್ಲ. ಅಲಂಕಾರವಿತ್ತು ಕೃತಕತೆ ಇರಲಿಲ್ಲ. ನಿಸರ್ಗದತ್ತವಾಗಿದ್ದ ಹೂ, ಮಾವಿನೆಲೆ, ಬಾಳೆ ಕಂಬಗಳು ಕಂಗೊಳಿಸುತ್ತಿದ್ದವು. ಮನೆಯ ಮುಂದಿನ ವಿಶಾಲವಾದ ಬಯಲಿನಲ್ಲಿ ಮರದ ಕಂಬಗಳನ್ನು ನೆಟ್ಟು ತೆಂಗಿನ ಗರಿಗಳನ್ನು ಹೆಣೆದು ಚಂದವಾದ ಚಪ್ಪರವನ್ನು ಹಾಕಲಾಗಿತ್ತು. ಆ ಕೆಲಸವನ್ನು ಕೂಲಿ–ಕಾರ್ಮಿಕರು ವಾರಗಟ್ಟಲೆ ಶ್ರಮಪಟ್ಟು ನಿರ್ಮಿಸಿದ್ದರು. 

ಅವರಿಗೆ ಕೈ ತುಂಬಾ ಕೂಲಿ, ಹೊಟ್ಟೆ ತುಂಬಾ ಊಟ ಸಿಕ್ಕಿತು. ಅಡುಗೆಗೆ ಬೇಕಾದ ಸೌದೆ, ತರಕಾರಿ, ಸಾಂಬಾರ ಪದಾರ್ಥಗಳು, ಅಕ್ಕಿ–ಬೇಳೆಗಳನ್ನು ಸಿದ್ಧ‌ಪಡಿಸಲು ಒಂದು ಶ್ರಮಿಕರ ಗುಂಪು, ಅಡುಗೆ ಮಾಡಲು ನುರಿತ ಗ್ರಾಮೀಣ ಬಾಣಸಿಗರಿಗೆ ಕೈ ತುಂಬಾ ಕೆಲಸ. ಹಪ್ಪಳ–ಸಂಡಿಗೆ, ಉಪ್ಪಿನಕಾಯಿ, ತಯಾರಿಸುವ ಬಡ ಮಹಿಳೆಯರು!

ಇನ್ನು ಸವಿಯಾದ ರುಚಿಯಾದ ಊಟವನ್ನು ಕುಡಿ ಬಾಳೆಎಲೆಯಲ್ಲಿ ಉಂಡು ಸವಿಯಲು ನಮ್ಮಲ್ಲಿ ಕೆಲಸಕ್ಕೆ ಬರುತ್ತಿದ್ದ ಸುತ್ತಮುತ್ತಲಿನ ಹಳ್ಳಿಯ ಬಡಕಾರ್ಮಿಕರು, ವ್ಯಾಪಾರ ಮಾಡುತ್ತಿದ್ದ ಸ್ನೇಹಿತರು... ಹೀಗೆ ವಾರವಿಡೀ ನಡೆದ ಶಾಸ್ತ್ರೋಕ್ತವಾದ ಮದುವೆಯನ್ನೂ ಮರೆಯಲು ಸಾಧ್ಯವೇ?
–ಎಂ. ಪುಟ್ಟತಾಯಮ್ಮ, ಗುಂಡ್ಲುಪೇಟೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !