‘ಸೀರೆ ಖರೀದಿಸಿ ಬರುವುದರಲ್ಲಿ ಮನೆಯ ತುಂಬ ನೀರು

7

‘ಸೀರೆ ಖರೀದಿಸಿ ಬರುವುದರಲ್ಲಿ ಮನೆಯ ತುಂಬ ನೀರು

Published:
Updated:
Deccan Herald

ಚೈನಾಸಿಲ್ಕ್ ಸೀರೆ ಹೊಸದಾಗಿ ಬಂದ ಸಮಯವದು. ಎಂಬತ್ತರ ದಶಕ ಇರಬಹುದು. ಅವುಗಳ ಹೊಳಪು ಹೊಸತನ ನನಗೆ ತುಂಬಾ ಇಷ್ಟವಾಗಿತ್ತು. ಬೆಲೆಯೂ ಕಡಿಮೆ. ಖರೇ ಖರೇ ರೇಷ್ಮೆ ಸೀರೆಗಳ ಬೆಲೆ ಸಾವಿರಾರು ರೂಪಾಯಿ. ಇವು ನೂರಾರು ರೂಪಾಯಿಗಳಲ್ಲಿ ಲಭ್ಯ! ಯಾವಾಗ ಕೊಂಡೇನೆಂದು ಕಾತರ. ನಮ್ಮದೇ ಕ್ವಾಟ್ರಸ್ಸಿನ ಗೆಳತಿಯರೊಂದಿಗೆ ಆ ಸೀರೆಗಳ ಖರೀದಿಗೆ ಹೋಗಿ ಬರಲು ನಿರ್ಧರಿಸಲಾಯಿತು.

ಮರುದಿನವೇ ಮಕ್ಕಳು ಶಾಲೆಗೆ, ಯಜಮಾನರು ಆಫೀಸಿಗೆ ಹೋದರು. ನಾವು ಅದಕ್ಕಂತಲೇ ಕಾಯುತ್ತಿದ್ದೆವು. ಆಮೇಲೆ ಬಸ್ಸು ಹಿಡಿದು ಮಾರ್ಕೆಟ್‌ಗೆ ಹೋದೆವು. ಸೀರೆ ಅಂಗಡಿಯಲ್ಲಿನ ಎಲ್ಲಾ ಸೀರೆಗಳನ್ನು ಕಿತ್ತು ಹಾಕಿಸಿ ನಮ್ಮ ನಮ್ಮ ಮೆಚ್ಚಿನ ಸೀರೆಗಳನ್ನು ಆಯ್ದುಕೊಂಡು ಕ್ವಾಟ್ರಸ್ಸಿಗೆ ಬಂದೆವು.

ಕೀಲಿ ತೆಗೆದು ಬಾಗಿಲು ನೂಕಿದರೆ ಮನೆ ತುಂಬಾ ನೀರು. ಗಾಬರಿಯಾದೆ. ಇದೇನಾಗಿದೆ ಇಲ್ಲಿ ಎನ್ನುತ್ತ ಆ ನೀರಿನಲ್ಲೇ ಕಾಲಿಟ್ಟು ಒಳಗೆ ಹೋಗಿ ನೋಡಿದಾಗ ಎಡವಟ್ಟು ಅರ್ಥವಾಯ್ತು. ನಾವು ಕ್ವಾರ್ಟಸ್ ಬಿಡುವಾಗ ಮೇಲಿನ ಟ್ಯಾಂಕ್ ಖಾಲಿ ಆಗಿತ್ತು. ತಿರುಗಿಸಿಟ್ಟ ನಳ ಹಾಗೇ ಇದೆ. ವಾಚಮನ್ ನೀರು ಏರಿಸಿದ್ದಾನೆ.

ಸಿಂಕ್ ತುಂಬಿ, ನೀರು ಮನೆಯೊಳಗೆ ಹರಿದು ಕೋಣೆಗಳು ಜಲಾವೃತಗೊಂಡಿದ್ದವು. ಇನ್ನು ಹೆಚ್ಚಿನ ನೀರು ಬಾಲ್ಕನಿಯ ಪೈಪಿನಿಂದ ಸಪ್ಪಳ ಮಾಡುತ್ತ ಕೆಳಗೆ ಬೀಳುವುದನ್ನು ಕಂಡ ವಾಚಮನ್ ನೀರು ಏರಿಸುವುದನ್ನು ನಿಲ್ಲಿಸಿದ್ದಾನೆ. ಆಗಾಗ್ಗೆ ಈ ಪ್ರಸಂಗ ನೆನಪಾಗಿ ಬರುತ್ತದೆ. ಬಂದಾಗ ನಗೆಯುಕ್ಕುತ್ತದೆ. 
– ಶಕುಂತಲಾ ಭೈರನಟ್ಟಿ, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !