ಬಾವಿ ಕಪ್ಪೆ

ಶುಕ್ರವಾರ, ಮಾರ್ಚ್ 22, 2019
25 °C

ಬಾವಿ ಕಪ್ಪೆ

Published:
Updated:
Prajavani

ಚಿಕ್ಕದೊಂದು ಬಾವಿಯಲ್ಲಿ

ಚೊಕ್ಕದಾದ ನೀರಿನಲ್ಲಿ

ಬಹಳ ಕಾಲದಿಂದ ಒಂದು ಕಪ್ಪೆ ಇತ್ತು,

ಬಾವಿಯೊಳಗೇ ಹಾಡಿ ಕುಣಿದು

ನನ್ನ ಲೋಕ– ನನ್ನ ಮನೆ

ನನ್ನದೇ ಬ್ರಹ್ಮಾಂಡವೆನುತ ಬೀಗುತಿತ್ತು.

 

ನದಿಯಿಂದ ಒಮ್ಮೆ ಹಾರಿ ಹಾರಿ

ಬಂದ ಇನ್ನೊಂದು ಕಪ್ಪೆ

ಬಾವಿಯಲ್ಲಿ ನೀರು ಕಂಡು

ನೆಗೆದುಬಿಟ್ಟಿತು,

ಬಾವಿ ಕಪ್ಪೆ ಕೋಪಗೊಂಡು

ಯಾರು ನೀನು? ಯಾವ ಊರು?

ಇಲ್ಲಿಗೇಕೆ ಬಂದೆ ಬೇಗ

ಹೇಳು ಎಂದಿತು.

 

ನದಿಯಿಂದ ಬಂದೆ ಗೆಳೆಯಾ

ಹಾದಿಯಲ್ಲಿ ಹೋಗುತಿದ್ದೆ

ಇಲ್ಲಿ ನಿಂತ ನೀರು ಕಂಡು

ಇಳಿದುಬಿಟ್ಟೆನು,

ಮೇಲೆ ಏರಲಾಗದೀಗ

ಕೆಟ್ಟು ಹೋದೆನು.

 

ಇರಲಿ ಇಲ್ಲೇ ಉಳಿದುಬಿಡು

ಹೇಳು ಈಗ ನಿನ್ನ ನದಿಯು

ಎಷ್ಟು ದೊಡ್ಡದು?

ನನ್ನ ಈ ಬಾವಿಗಿಂತ

ಎಷ್ಟು ಚಿಕ್ಕದು?

 

ನದಿಯ ಅಳೆಯಲಾಗದು

ಅಳೆದು ಹೋಲಿಸಲಾಗದು

ಇಂಥ ಬಾವಿ ಸಾವಿರಾರು

ಸೇರಿದರೂ ಮತ್ತೆ ನೂರು

ನದಿಯ ಉದ್ದ ಅಗಲ ಆಳ

ಎಂದೂ ಆಗದು.

 

ಬಾವಿ ಕಪ್ಪೆ ರೋಷದಿಂದ

ನೀನು ಬರೀ ಸುಳ್ಳುಗಾರ,

ಎಲ್ಲೂ ಇಲ್ಲ ಈ ವಿಶಾಲ

ನದಿಯ ತಂದು ಬೇಗ ತನಗೆ

ತೋರಿಸೆಂದಿತು

 

ನದಿಯ ಕಪ್ಪೆ ಬಾವಿ ಕಪ್ಪೆ

ಬಾವಿಯಲ್ಲೇ ಉಳಿದು ಬೆಳೆದು

ಇದೇ ಜಗಳ ನಿತ್ಯವೂ ನಡೆಯತೊಡಗಿತು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !