ದೇಹ ತೂಕ ಭಾರವಲ್ಲ...

7

ದೇಹ ತೂಕ ಭಾರವಲ್ಲ...

Published:
Updated:

ಹೆಣ್ಣು ಯಾವಾಗಲೂ ಹೆಚ್ಚು ಯೋಚಿಸುವುದು ತನ್ನ ಸೌಂದರ್ಯ ಹಾಗೂ ದೇಹಸಿರಿಯ ಬಗ್ಗೆ. ಆದರೆ ಕೆಲವೊಮ್ಮೆ ಆನುವಂಶಿಯತೆಯಿಂದ, ಜೀವನಶೈಲಿಯಲ್ಲಾದ ಏರುಪೇರು ಹಾಗೂ ಸೇವಿಸುವ ಆಹಾರದಿಂದಾಗಿ ದೇಹ ಅಡ್ಡಾದಿಡ್ಡಿ ಬೆಳೆದು ಬಿಡುತ್ತದೆ.

ಮಹಿಳೆಯರಿಗೆ ದೇಹ ತೂಕ ಸ್ವಲ್ಪ ಹೆಚ್ಚಿದರೂ ಸಾಕು ಜೀವನವೇ ಮುಗಿದು ಹೋದಂತೆ ಆಡುತ್ತಾರೆ. ಅದಕ್ಕೆ ಕಾರಣ, ಕೇವಲ ತೂಕ ಹೆಚ್ಚಿದ್ದು ಮಾತ್ರವಲ್ಲದೇ, ಸುತ್ತಲಿನವರ ಅಣಕವೂ ಇರಬಹುದು. 

ಆದರೆ ಇಲ್ಲೊಬ್ಬರು ಮಹಿಳೆ ಇದ್ದಾರೆ. ಅವರು ದೇಹತೂಕವನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಸಾಧನೆ ಮಾಡಿದ್ದಾರೆ. ವಿಶ್ವಖ್ಯಾತಿ ಗಳಿಸಿದ್ದಾರೆ. ಅವರ ಹೆಸರು ದನ ಫಾಲ್ಸೆಟ್ಟಿ. ಅತಿ ತೂಕದ ಕಾರಣಕ್ಕೆ ಎಲ್ಲರೂ ಇವರನ್ನು ವ್ಯಂಗ್ಯ ಮಾಡುತ್ತಿದ್ದರು. ಹೋದಲೆಲ್ಲಾ ಅಪಹಾಸ್ಯ ಮಾಡುತ್ತಿದ್ದರು. ಅದು ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಆದರೆ ಅವರು ಈ ವಿಚಾರಕ್ಕಾಗಿ ಕೊರಗುತ್ತಾ ಕೂರಲಿಲ್ಲ. ಬದಲಿಗೆ ತಾನು ತೂಕದಿಂದಲೇ ಹೆಸರುಗಳಿಸಬೇಕು ಎಂದು ನಿರ್ಧರಿಸಿದರು. ಅದಕ್ಕಾಗಿ ಯೋಗ ಮಾಡಲು ಆರಂಭಿಸಿದರು. ಕೊನೆಗೆ ಯೋಗ ಗುರುವಾದರು. ಅದೇ ತೂಕ ಇರಿಸಿಕೊಂಡು ವಿಭಿನ್ನ ರೀತಿಯ ಯೋಗದ ಭಂಗಿಗಳನ್ನು ಕಲಿತರು. ಬೇರೆಯವರಿಗೂ ಕಲಿಸಿದರು. ಅಲ್ಲದೇ ಫಿಟ್‌ನೆಟ್ ಕ್ಷೇತ್ರದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !